ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಇ. ಶ್ರೀಧರನ್ ಸೆಂಟರ್ ಫಾರ್ ಲೈಫ್ ಸ್ಕಿಲ್ಸ್ ಎಜುಕೇಶನ್ ಮತ್ತು ವೃತ್ತಿ ಮಾರ್ಗದರ್ಶನ-ಸಮಾಲೋಚನಾ ಕೋಶ, ವಿಎಚ್‍ಎಸ್‍ಇ ವಿಭಾಗ ವತಿಯಿಂದ ಕೇರಳ ಸಾಮಾನ್ಯ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ಜಂಟಿಯಾಗಿ 'ಒಡಿಸ್ಸಿ' ಎರಡು ದಿನಗಳ ನಾಯಕತ್ವ ತರಬೇತಿ ಆಯೋಜಿಸಲಾಯಿತು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯಾ ಕ್ಯಾಂಪಸ್‍ನಲ್ಲಿ ನಡೆದ ಕಾರ್ಯಕ್ರಮವನ್ನು ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಉದ್ಘಾಟಿಸಿದರು. ಶಿಕ್ಷಣ ಇಲಾಖೆಯ ಡೀನ್ ಪೆÇ್ರ.ವಿ.ಪಿ. ಜೋಶಿತ್ ಅಧ್ಯಕ್ಷತೆ ವಹಿಸಿದ್ದರು. ಇ.ಶ್ರೀಧರನ್ ಸೆಂಟರ್ ಫಾರ್ ಲೈಫ್ ಸ್ಕಿಲ್ಸ್ ಶಿಕ್ಷಣ ನಿರ್ದೇಶಕ ಪೆÇ್ರ.ಎಂ.ಎನ್. ಮುಸ್ತಫಾ, ಪೆÇ್ರ.ಅಮೃತ್ ಜಿ.ಕುಮಾರ್, ಕೆ.ಪಿ. ತಾಹಿರಾ, ಟಿ.ಸಿ. ನೀನಾ ಉಪಸ್ಥಿತರಿದ್ದರು.
ಡಾ. ಎ. ಶ್ರೀನಾ, ಡಾ.ಸುಬ್ರಹ್ಮಣ್ಯ ಪೈಲೂರ್, ಡಾ.ವಿ.ಆದಿತ್ಯ, ಡಾ.ಆರ್.ಚಂದ್ರಬೋಸ್, ಸೂರ್ಯ ನಾರಾಯಣನ್ ಮತ್ತು ಯು.ಶ್ರೀಜಿತ್ ತರಗತಿ ನಡೆಸಿಕೊಟ್ಟರು. ವಿಎಚ್‍ಎಸ್‍ಇ ಪಯ್ಯನ್ನೂರು ಪ್ರದೇಶದ ಭಾಗವಾಗಿರುವ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.


