ಕಾಸರಗೋಡು: ಕುಂಬಳೆ ಆರಿಕ್ಕಾಡಿ ಟೋಲ್ ಗೇಟಿನಲ್ಲಿ ಪ್ರಯಾಣಿಕನನ್ನು ಕಾರಿನಿಂದ ಎಳೆದೊಯ್ದ ಪೆÇಲೀಸರ ವರ್ತನೆ ಖಂಡನೀಯ ಹಾಗೂ ಅಮಾನವೀಯವಾದುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತಿಳಿಸಿದ್ದಾರೆ.
ಟೋಲ್ ಪ್ಲಾಜಾದಲ್ಲಿ ಸಂಘರ್ಷ ಸೃಷ್ಟಿಸಲು ಪಿಣರಾಯಿ ವಿಜಯನ್ ಸರ್ಕಾರದ ಪೆÇಲೀಸರು ಉದ್ದೇಶಪೂರ್ವಕ ಪ್ರಯತ್ನ ನಡೆಸುತ್ತಿದ್ದಾರೆ. ಎಳೆಯ ಮಗುವಿನೊಂದಿಗೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಕಾರಿನಿಂದ ಹಿಡಿದೆಳೆದು ಕೆಳಗಿಳಿಸಿ ಪೆÇಲೀಸ್ ವಾಹನಕ್ಕೆ ಸಾಗಿಸಿದ ರೀತಿ ಅಕ್ಷಮ್ಯ ಮತ್ತು ಪೆÇಲೀಸ್ ಅತಿಕ್ರಮಕ್ಕೆ ಸಾಕ್ಷಿಯಾಗಿದೆ . ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಪೆÇಲೀಸರ ಅತಿರೇಕದ ವರ್ತನೆಯನ್ನು ಸಹಿಸಲಾಗದು. ಟೋಲ್ ವಸೂಲಾತಿಯ ವಿರುದ್ಧ ಜನಪರ ಸತ್ಯಾಗ್ರಹ ನಡೆಯುತ್ತಿರುವಾಗ ಪ್ರಯಾಣಿಕನನ್ನು ಬಲವಂತವಾಗಿ ಕಾರಿನಿಂದೆಳೆದು ವಶಕ್ಕೆ ತೆಗೆದುಕೊಂಡಿರುವುದು ಶಾಂತಿಯುತ ಹೋರಾಟವನ್ನು ಸಂಘರ್ಷಭರಿತವಾಗಿಸುವ ಯತ್ನವಾಗಿದೆ. ಈ ಹಿನ್ನೆಲೆಯಲ್ಲಿ ಕುಂಬಳೆ ಠಾಣಾ ಪೆÇಲೀಸ್ ಇನ್ಸ್‍ಪೆಕ್ಟರ್ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಎಂ. ಎಲ್. ಅಶ್ವಿನಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

.jpg)
