ಪೆರ್ಲ : ಸೇರಾಜೆ ಸಮೀಪದ ಕಾನ ಶ್ರೀ ಮಲರಾಯಿ ಧೂಮಾವತೀ ಜಟಾಧಾರಿ ನಾಗ ಪರಿವಾರ ದೈವಸ್ಥಾನದ ಒಂಭತ್ತನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವ, ವಿಶೇಷವಾಗಿ ಶ್ರೀ ಮಲರಾಯಿ ದೈವದ ಪ್ರತಿಷ್ಠಾ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮದಂಗವಾಗಿ ಗೋಳಿತ್ತಾರು ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಿಂದ ಆರಂಭಗೊಂಡ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಧಾರ್ಮಿಕ ಮುಂದಾಳು ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ ಚಾಲನೆ ನೀಡಿದರು.
ಮಂದಿರದ ಅರ್ಚಕ ನವೀನ್ ನಾಯಕ್ ಇಡ್ಯಾಳ,ಮಂದಿರದ ಸೇವಾ ಸಮಿತಿ ಅಧ್ಯಕ್ಷ ಕಮಲಾಕ್ಷ ಕಾನ, ಬ್ರಹ್ಮಕಲಶೋತ್ಸವ ಸಮಿತಿಯ ಅಮ್ಮು ಪೂಜಾರಿ ತೊಕ್ಕೊಟು,ಉದಯ ಚೆಟ್ಟಿಯಾರ್ ಪೆರ್ಲ, ವೇದಾವತಿ ಪುತ್ತೂರು ಬಾಬು ಪೂಜಾರಿ ಕಾನ,ಸಂಕಪ್ಪ ಸುವರ್ಣ ಬಾಡೂರು, ಸುರೇಶ್ ಕೆ.ಕಾನ,ಹರೀಶ ಸೇರಾಜೆ, ಗಿರಿಯಪ್ಪ ಪೂಜಾರಿ, ನಾರಾಯಣ ಪೂಜಾರಿ ಗುಂಡಿತ್ತಾರು, ಕುಟುಂಬಸ್ಥರು,ಮಹಿಳಾ ಸಮಿತಿ ಹಾಗೂ ಊರ ಸಮಸ್ತರು ಪಾಲ್ಗೊಂಡಿದ್ದರು. ಬಳಿಕ ಕ್ಷೇತ್ರದ ತಂತ್ರಿಗಳಾದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಅವರಿಗೆವ ಪೂರ್ಣಕುಂಭ ಸ್ವಾಗತ, ಉಗ್ರಾಣ ಮುಹೂರ್ತ ಜರಗಿತು.
ಇಂದಿನ ಕಾರ್ಯಕ್ರಮ:
ಜ.19 ಬೆಳಗ್ಗೆ 6.30 ಗಂಟೆಗೆ ಗಣಪತಿ ಹೋಮ, ಕಲಶಪೂಜೆ ಬೆಳಗ್ಗೆ 7.15 ರಿಂದ 8.21 ರ ಮಕರಲಗ್ನ ಶುಭಮುಹೂರ್ತದಲ್ಲಿ ಪುನರ್ ನಾಗ ಪ್ರತಿಷ್ಠೆ, 7.30 ರಿಂದ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಇವರಿಂದ ಭಜನೆ, 9 ಗಂಟೆಯಿಂದ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಭಜನಾ ಸಮಿತಿ ಪೆರ್ಲ ಇವರಿಂದ ಭಜನೆ, ಪೂರ್ವಾಹ್ನ ಗಂಟೆ 10.45 ರಿಂದ 11.30 ರ ಮೀನಲಗ್ನ ಶುಭಮುಹೂರ್ತದಲ್ಲಿ ಶ್ರೀ ಮಲರಾಯ ದೈವದ ಪ್ರತಿಷ್ಠೆ ಮತ್ತು ಬ್ರಷ್ಕಕಲಶ ಅಭಿಷೇಕ, ನಿತ್ಯನೈಮಿತ್ತಿಕ ನಿರ್ಣಯ. ಬೆಳಗ್ಗೆ ಗಂಟೆ 11.30 ರಿಂದ ವೆಂಕಟ್ರಮಣ ದೇವರ ಹರಿಸೇವೆ, ದೈವಗಳಿಗೆ ತಂಬಿಲ, ಅಪರಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ, ಸಂಜೆ 3 ಗಂಟೆಗೆ ರಾಹುಗುಳಿಗ ಬನದಲ್ಲಿ ತಂಬಿಲ, 5 ಗಂಟೆಗೆ ಪರಿವಾರ ದೈವಗಳ ಭಂಡಾರ ಇಳಿಯುವುದು. ಗಂಟೆ 6 ರಿಂದ ಸ್ಥಳ ಗುಳಿಗನ ಕೋಲ, ರಾತ್ರಿ 7 ಗಂಟೆಯಿಂದ ಕಲ್ಲಾಲ್ದ ಗುಳಿಗನ ಕೋಲ, ರಾತ್ರಿ ಗಂಟೆ 7.30 ರಿಂದ ಗುರುಹಿರಿಯರಿಗೆ ಬಡಿಸುವುದು, ರಾತ್ರಿ ಗಂಟೆ 8ರಿಂದ ಅನ್ನಸಂತರ್ಪಣೆ, ಗಂಟೆ 9ರಿಂದ ಮೂಕಾಂಬಿಕ ಗುಳಿಗ ಹಾಗೂ ಮೊಡ್ಚಾಮುಂಡಿ ದೈವದ ನೇಮ, ಪ್ರಸಾದ ವಿತರಣೆ. ಜ.20ಕ್ಕೆ ಬೆಳಗ್ಗೆ ಗಂಟೆ 7ರಿಂದ ಶ್ರೀ ಮಲರಾಯಿ, ಧೂಮಾವತಿ ದೈವಗಳ ಭಂಡಾರ ಇಳಿಯುವುದು. 8 ಗಂಟೆಗೆ ಶ್ರೀ ಮಲರಾಯಿ ದೈವದ ನೇಮೋತ್ಸವ, ಮಧ್ಯಾಹ್ನ 1ಗಂಟೆಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ ಗಂಟೆ 2ರಿಂದ ಶ್ರೀ ಧೂಮಾವತಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತಿ ಹಾಗೂ ಕೊರಗುತನಿಯ ದೈವಗಳ ಭಂಡಾರ ಇಳಿಯುವುದು. ರಾತ್ರಿ 8ಗಂಟೆಗೆ ಅನ್ನಸಂತರ್ಪಣೆ, ಗಂಟೆ 9ರಿಂದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತಿ ಹಾಗೂ ಕೊರಗುತನಿಯ ದೈವಗಳ ನೇಮೋತ್ಸವ. ಮರುದಿನ ಪ್ರಾತಃಕಾಲ ಪ್ರಸಾದ ವಿತರಣೆಯೊಂದಿಗೆ ಸಮಾಪ್ತಿಗೊಳ್ಳಲಿದೆ.




