ಬದಿಯಡ್ಕ: ಕುಂಬ್ಡಾಜೆ ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾರ್ಚ್ 1 ರಿಂದ 9ರ ತನಕ ಜರಗಲಿದ್ದು ಪೂರ್ವಭಾವಿಯಾಗಿ ವಿವಿಧ ಸಮಿತಿಗಳ ಸಭೆ ಭಾನುವಾರ ಶ್ರೀ ಕ್ಷೇತ್ರದಲ್ಲಿ ಜರಗಿತು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹರಿನಾರಾಯಣ ಶಿರಂತಡ್ಕ, ಕಾರ್ಯಾಧ್ಯಕ್ಷ ಡಾ. ವೇಣುಗೋಪಾಲ ಕಳೆಯತ್ತೋಡಿ, ಸೇವಾಸಮಿತಿಯ ಅಧ್ಯಕ್ಷ ಅಜ್ಜಿಮೂಲೆ ಕೃಷ್ಣ ಭಟ್, ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಶ್ಯಾಮಪ್ರಸಾದ ಸರಳಿ, ಆಡಳಿತ ಮೊಕ್ತೇಸರ ಹರಿನಾರಾಯಣ ನಡುವಂತಿಲ್ಲಾಯ, ಡಾ. ಶ್ರೀನಿಧಿ ಸರಳಾಯ. ಪ್ರೊ.ಎ.ಶ್ರೀನಾಥ್ ಕೊಲ್ಲಂಗಾನ ಮೊದಲಾದವರು ಪಾಲ್ಗೊಂಡಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಶ್ರೀಧರನ್ ದಿಕ್ಕತ್ತೋಡಿ ವಂದಿಸಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಗವದ್ಭಕ್ತರು ಪಾಲ್ಗೊಂಡಿದ್ದರು.

.jpg)
