ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ, ಶಾಸಕ ಆರ್. ವೈಥಿಲಿಂಗಂ ಬುಧವಾರ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಬುಧವಾರ ಬೆಳಗ್ಗೆ ಭೇಟಿ ಮಾಡಿದ್ದರು. ಈ ಭೇಟಿ ಬಳಿಕ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಡಿಎಂಕೆ ಹಿರಿಯ ನಾಯಕರಾದ ಕೆ.ಎನ್. ನೆಹರು, ಟಿಕೆಎಸ್ ಇಳಂಗೋವನ್ ಸೇರಿದಂತೆ ಹಲವರು ಹಾಜರಿದ್ದರು.
ಎಐಎಡಿಎಂಕೆ ಪದಚ್ಯುತ ನಾಯಕ ಓ.ಪನ್ನೀರಸೆಲ್ವಂ ಅವರ ಕಟ್ಟ ಬೆಂಬಲಿಗರಾಗಿದ್ದ ವೈಥಿಲಿಂಗಂ ಅವರು, ತಂಜಾವೂರು ಜಿಲ್ಲೆಯ ಓರತ್ತನಾಡು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

