ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಹಾಗೂ ಅಭಿವೃದ್ಧಿಗಾಗಿ 'ವಿಬಿ ಜಿ ರಾಂ ಜಿ' ಕಾನೂನನ್ನು ಜಾರಿಗೆ ತರಲಾಗಿದೆ.
ಈ ಹೊಸ ಕಾನೂನು ಗ್ರಾಮಗಳಲ್ಲಿ 125 ದಿನಗಳ ಖಚಿತ ಉದ್ಯೋಗವನ್ನು ಖಾತ್ರಿಪಡಿಸುತ್ತದೆ. ಜೊತೆಗೆ, ಭ್ರಷ್ಟಾಚಾರ ಮತ್ತು ಹಣ ಸೋರಿಕೆಗಳನ್ನು ತಡೆಯುತ್ತದೆ, ಈ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ. ರೈತರು, ಪಶುಸಂಗೋಪಕರು ಹಾಗೂ ಮೀನುಗಾರರಿಗೆ ಹೊಸ ಸೌಲಭ್ಯಗಳನ್ನು ಒದಗಿಸಲಿದೆ ಎಂದು ರಾಷ್ಟ್ರಪತಿ ಮುರ್ಮು ಹೇಳಿದರು.
ರಾಷ್ಟ್ರಪತಿಗಳ ಭಾಷಣದ ವೇಳೆ ವಿಬಿ-ಜಿ ರಾಮ್ ಜಿ ಗೆ ವಿರೋಧವನ್ನು ವ್ಯಕ್ತಪಡಿಸಿ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಗದ್ದಲವನ್ನು ಸೃಷ್ಟಿಸಿದೆ.

