HEALTH TIPS

'10 ವರ್ಷ ಹಿಂದೆ ಬ್ಯಾಂಕ್ ಖಾತೆ ಇಲ್ಲದಿದ್ದ ಮುಂಬೈಯ ಒಬ್ಬ ಬೀದಿ ವ್ಯಾಪಾರಿ ಇಂದು ಆನ್‌ಲೈನ್ ನಲ್ಲಿ ವ್ಯವಹರಿಸುತ್ತಾರೆ; ಭಾರತ ಅಭಿವೃದ್ಧಿಯಾಗಿದೆ': ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್

ನವದೆಹಲಿ: ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಎಐ ತಂತ್ರಜ್ಞಾನಕ್ಕೆ ಸುರಕ್ಷಿತ ಮೇಲ್ವಿಚಾರಣೆ ಅಗತ್ಯವಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಮಾನುಯೆಲ್ ಮ್ಯಾಕ್ರೋನ್ ಭಾರತದಲ್ಲಿ ನಡೆದ ಜಾಗತಿಕ ಕೃತಕ ಬುದ್ಧಿಮತ್ತೆ (AI) ಶೃಂಗಸಭೆಯಲ್ಲಿ ಹೇಳಿದ್ದಾರೆ.

ನಾವು ಈ ಕ್ಷೇತ್ರದ ನಿಯಮಗಳನ್ನು ರೂಪಿಸುವ ಕಾರ್ಯವನ್ನು ಮುಂದುವರಿಸಲು ಬದ್ಧರಾಗಿದ್ದೇವೆ.

ಭಾರತಂತಹ ನಮ್ಮ ಮೈತ್ರಿ ರಾಷ್ಟ್ರಗಳೊಂದಿಗೆ ಸೇರಿ ನಿಯಮ ರೂಪಿಸುತ್ತೇವೆ ಎಂದರು.

ಯೂರೋಪ್ ಕೇವಲ ನಿಯಂತ್ರಣದತ್ತ ಮಾತ್ರ ಗಮನ ಹರಿಸುತ್ತಿಲ್ಲ - ಯೂರೋಪ್ ನವೀನತೆ ಮತ್ತು ಹೂಡಿಕೆಗೆ ಅವಕಾಶ ನೀಡುವ ಸ್ಥಳವಾಗಿದೆ, ಆದರೆ ಅದು ಸುರಕ್ಷಿತ ವಾತಾವರಣವೂ ಹೌದು ಎಂದರು.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಭಾರತ ವಹಿಸಿರುವ ಪ್ರಮುಖ ಪಾತ್ರವನ್ನು ಫ್ರೆಂಚ್ ಅಧ್ಯಕ್ಷರು ಪ್ರಶಂಸಿಸಿದರು.

ಹತ್ತು ವರ್ಷಗಳ ಹಿಂದೆ ಮುಂಬೈಯಲ್ಲಿ ಒಬ್ಬರು ಬೀದಿ ವ್ಯಾಪಾರಿ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂದು ಅವರು ಆನ್‌ಲೈನ್ ಪಾವತಿಗಳನ್ನು ಸ್ವೀಕರಿಸುತ್ತಾರೆ, ವ್ಯವಹರಿಸುತ್ತಾರೆ,. ಅವರಲ್ಲಿ ವಿಳಾಸವಿಲ್ಲ, ದಾಖಲೆಗಳಿಲ್ಲ, ಯಾವುದೇ ದಾಖಲೆಗಳಿಲ್ಲದಿದ್ದರೂ ತಮ್ಮ ಮೊಬೈಲ್ ಮೂಲಕ ಪಾವತಿಗಳನ್ನು ಸ್ವೀಕರಿಸುತ್ತಿದ್ದಾರೆ. ಭಾರತವು ವಿಶ್ವದಲ್ಲೇ ಯಾರೂ ನಿರ್ಮಿಸದಂತಹ ವ್ಯವಸ್ಥೆಯನ್ನು ನಿರ್ಮಿಸಿದೆ. 1.4 ಬಿಲಿಯನ್ ಜನರಿಗೆ ಡಿಜಿಟಲ್ ಗುರುತು ಇದೆ ಎಂದು ಮ್ಯಾಕ್ರೋನ್ ಹೇಳಿದರು.

ಭಾರತವು ವಿಶ್ವದಲ್ಲೇ ಯಾರೂ ನಿರ್ಮಿಸದಂತಹ ವ್ಯವಸ್ಥೆಯನ್ನು ನಿರ್ಮಿಸಿದೆ. 1.4 ಬಿಲಿಯನ್ ಜನರಿಗೆ ಡಿಜಿಟಲ್ ಗುರುತು ಸಿಕ್ಕಿದೆ. ಪ್ರತಿ ತಿಂಗಳು 20 ಬಿಲಿಯನ್ ವ್ಯವಹಾರಗಳನ್ನು ಸಂಸ್ಕರಿಸುವ ಪಾವತಿ ವ್ಯವಸ್ಥೆ, 500 ಮಿಲಿಯನ್ ಡಿಜಿಟಲ್ ಆರೋಗ್ಯ ಗುರುತುಗಳನ್ನು ನೀಡಿರುವ ಆರೋಗ್ಯ ಮೂಲಸೌಕರ್ಯ- ಇವೆಲ್ಲವೂ ಭಾರತ ಸ್ಟ್ಯಾಕ್ - ಮುಕ್ತ, ಪರಸ್ಪರ ಸಂಪರ್ಕ ಹೊಂದಿರುವ, ಸ್ವಾಯತ್ತ ಡಿಜಿಟಲ್ ವ್ಯವಸ್ಥೆಯಿಂದ ಸಾಧ್ಯವಾಗಿದೆ. ಇದು ಮುಕ್ತ, ಪರಸ್ಪರ ಸಂಪರ್ಕ ಹೊಂದಿದ ಮತ್ತು ಸ್ವಾಯತ್ತ ವ್ಯವಸ್ಥೆಯಾಗಿದೆ. ಈ ಶೃಂಗಸಭೆಯ ಉದ್ದೇಶವೂ ಅದೇ. ನಾವು ಭಾರೀ ವೇಗದ ಬೆಳವಣಿಗೆಯ ಆರಂಭದಲ್ಲಿದ್ದೇವೆ ಎಂದರು.

ಕೃತಕ ಬುದ್ಧಿಮತ್ತೆ ಮಾನವಕುಲದ ವೇಗವಾದ ನವೀನತೆಗೆ ಪ್ರಮುಖ ಸಾಧನವಾಗಲಿದೆ ಎಂದು ಫ್ರೆಂಚ್ ಅಧ್ಯಕ್ಷರು ಅಭಿಪ್ರಾಯಪಟ್ಟರು.

ಕಳೆದ ವರ್ಷ ಫ್ರಾನ್ಸ್ ಮತ್ತು ಭಾರತ ಪ್ಯಾರಿಸ್‌ನಲ್ಲಿ AI ಆಕ್ಷನ್ ಸಮಿಟ್ ನ್ನು ಸಹ ಆಯೋಜಿಸಿದಾಗ, ಸಮಾಜ ಮತ್ತು ಆರ್ಥಿಕತೆಯನ್ನು ಪರಿವರ್ತಿಸುವ ತಂತ್ರಜ್ಞಾನಗಳಿಗೆ ಜಾಗತಿಕ ಮಾರ್ಗದರ್ಶಕ ತತ್ವಗಳನ್ನು ರೂಪಿಸಿದ್ದೇವೆ. ಕೃತಕ ಬುದ್ಧಿಮತ್ತೆ ಆರೋಗ್ಯ, ಇಂಧನ, ಸಾರಿಗೆ, ಕೃಷಿ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಉತ್ತಮ ಬದಲಾವಣೆ ತರಲು ಸಹಾಯಕವಾಗಲಿದೆ. ನಾವು ಈ ಕ್ರಾಂತಿಯಲ್ಲಿ ನಂಬಿಕೆ ಇಟ್ಟಿದ್ದೇವೆ. AI ಈಗ ಮಹತ್ವದ ತಂತ್ರಜ್ಞಾನ ಸ್ಪರ್ಧೆಯ ಕ್ಷೇತ್ರವಾಗಿದೆ. ದೊಡ್ಡ ತಂತ್ರಜ್ಞಾನ ಕಂಪನಿಗಳು ಇನ್ನಷ್ಟು ದೊಡ್ಡದಾಗಿವೆ ಎಂದು ಹೇಳಿದರು.

ನಾಗರಿಕರ ಹಿತಕ್ಕಾಗಿ ತಂತ್ರಜ್ಞಾನವನ್ನು ಬಳಸುತ್ತಿರುವ ಭಾರತದ ಪ್ರಯತ್ನಗಳನ್ನು ಮ್ಯಾಕ್ರೋನ್ ಪ್ರಶಂಸಿಸಿದರು. AI ಯ ಭವಿಷ್ಯವು ತಂತ್ರಜ್ಞಾನವನ್ನು ಮಾನವೀಯತೆಯೊಂದಿಗೆ ಸಂಯೋಜಿಸುವವರದ್ದಾಗಿರುತ್ತದೆ ಎಂದು ಹೇಳಿದರು.

ಎಐ, ಜಿಪಿಯು ಮತ್ತು ಚಿಪ್‌ಗಳು ಈಗ ಭೂರಾಜಕೀಯ ಮತ್ತು ಆರ್ಥಿಕ ಅರ್ಥಗಳಲ್ಲಿ ಮಹತ್ವ ಪಡೆದಿವೆ - ಕೆಲವೊಮ್ಮೆ ಉತ್ತಮ ಅವಕಾಶಗಳನ್ನು ನೀಡಿದರೆ ಇನ್ನು ಕೆಲವೊಮ್ಮೆ ಸವಾಲುಗಳಿಗೂ ಕಾರಣವಾಗಬಹುದು. ಭಾರತವು ಸಣ್ಣ ಭಾಷಾ ಮಾದರಿಗಳ (Small Language Models) ಮೇಲೆ ಗಮನಹರಿಸುವ ಸ್ವಾಯತ್ತ ನಿರ್ಧಾರ ಕೈಗೊಂಡಿದೆ. ನಿರ್ದಿಷ್ಟ ಕಾರ್ಯಗಳಿಗೆ ಹೊಂದುವಂತೆ, ಭಾರತ ಸರ್ಕಾರ ದೇಶದ ಸ್ಟಾರ್ಟ್‌ಅಪ್‌ಗಳಿಗೆ ಕಡಿಮೆ ವೆಚ್ಚದಲ್ಲಿ 38,000 ಜಿಪಿಯುಗಳನ್ನು ಒದಗಿಸಿದೆ ಎಂದು ಹೇಳಿದರು.

ಮುಂಬೈಯಲ್ಲಿನ ಒಂದು ಬೀದಿ ವ್ಯಾಪಾರಿಯ ಕಥೆಯಿಂದ ನಾನು ಪ್ರಾರಂಭಿಸಿದ್ದೆ. ಹತ್ತು ವರ್ಷಗಳ ಹಿಂದೆ 1.4 ಬಿಲಿಯನ್ ಜನರನ್ನು ಡಿಜಿಟಲ್ ಆರ್ಥಿಕತೆಯಲ್ಲಿ ಸೇರಿಸುವುದು ಸಾಧ್ಯವಿಲ್ಲ ಎಂದು ವಿಶ್ವ ಹೇಳಿತ್ತು. ಭಾರತ ಅದನ್ನು ತಪ್ಪು ಎಂದು ಸಾಬೀತುಪಡಿಸಿದೆ. ಇಂದು ಕೆಲವರು AI ದೊಡ್ಡ ಕಂಪನಿಗಳ ಆಟ ಎಂದು ಹೇಳುತ್ತಾರೆ. ಆದರೆ ಭಾರತ, ಫ್ರಾನ್ಸ್, ಯೂರೋಪ್ ಮತ್ತು ನಮ್ಮ ಪಾಲುದಾರರು ವಿಭಿನ್ನ ದಾರಿಯನ್ನು ತೋರಿಸಬಹುದು. ನವೀನತೆ ಮತ್ತು ಜವಾಬ್ದಾರಿ, ತಂತ್ರಜ್ಞಾನ ಮತ್ತು ಮಾನವೀಯತೆ - ಇವೆರಡನ್ನು ಸಂಯೋಜಿಸುವವರೇ AI ಯ ಭವಿಷ್ಯವನ್ನು ನಿರ್ಮಿಸಲಿದ್ದಾರೆ. ಭಾರತ ಮತ್ತು ಫ್ರಾನ್ಸ್ ಈ ಭವಿಷ್ಯವನ್ನು ಒಟ್ಟಿಗೆ ರೂಪಿಸಲಿವೆ," ಎಂದು ಮ್ಯಾಕ್ರೋನ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries