HEALTH TIPS

ವಿದ್ಯಾರ್ಥಿಗಳಿಗೆ ಅನುಭವಾಧಾರಿತ ಕಲಿಕೆಗೆ ವೇದಿಕೆ: ಪೀಸ್ ಕ್ರಿಯೇಟಿವ್ ಕುಂಜತ್ತೂರು ಶಾಲೆಯಲ್ಲಿ ಪೀಸ್ ಕಾರ್ನಿವಲ್ ಮೇಳ ಫೆಬ್ರವರಿ 14ಕ್ಕೆ

ಮಂಜೇಶ್ವರ: ವಿದ್ಯಾರ್ಥಿಗಳ ಶಿಕ್ಷಣವನ್ನು ಪಠ್ಯಪುಸ್ತಕಗಳ ಮಿತಿಯಿಂದ ಹೊರತಂದು ನೈಜ ಅನುಭವಗಳ ಮೂಲಕ ಸಮೃದ್ಧಗೊಳಿಸುವ ಉದ್ದೇಶದಿಂದ ಫೆ. 14 ರಂದು

ಪೀಸ್ ಕ್ರಿಯೇಟಿವ್ ಕುಂಜತ್ತೂರು ಶಾಲಾ ಆವರಣದಲ್ಲಿ ಬೃಹತ್ "ಪೀಸ್ ಕಾರ್ನಿವಲ್" ಮೇಳವನ್ನು ಹಮ್ಮಿಕೊಂಡಿರುವುದಾಗಿ ಸಂಬಂಧಪಟ್ಟವರು ಶಾಲಾ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಅಬ್ದುಲ್ ಖಾದರ್ ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆ 10 ರಿಂದ ರಾತ್ರಿ 10 ರ ವರೆಗೆ ಸಹಸ್ರಾರು ಮಂದಿ ಭಾಗವಹಿಸುವ ನಿರೀಕ್ಷೆಯಿರುವ ಈ ಕಾರ್ನಿವಲ್ ಶಿಕ್ಷಣ, ಉದ್ಯಮ ಮತ್ತು ಮನರಂಜನೆ ಅಪರೂಪದ ಸಂಗಮವಾಗಲಿರುವುದಾಗಿ ಅವರು ಹೇಳಿದರು.

ವ್ಯಾಪಾರ ವಹಿವಾಟಿನ ನೈಜ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ವ್ಯಾಪಾರಿಗಳು ಹಾಗೂ ಉದ್ಯಮಿಗಳನ್ನು ಈ ಕಾರ್ನಿವಲ್‍ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಆಹಾರ ಪದಾರ್ಥಗಳು, ಆಟಿಕೆಗಳು, ಕೈಗಾರಿಕಾ ಉತ್ಪನ್ನಗಳು, ಹಸ್ತಕಲಾ ವಸ್ತುಗಳು ಸೇರಿದಂತೆ ವಿವಿಧ ವಿಧದ ಸ್ಟಾಲ್‍ಗಳು ಮೇಳದ ಪ್ರಮುಖ ಆಕರ್ಷಣೆಯಾಗಲಿವೆ. ವಿದ್ಯಾರ್ಥಿಗಳು ಸ್ಟಾಲ್ ನಿರ್ವಹಣೆ, ಗ್ರಾಹಕ ಸಂಪರ್ಕ, ಲೆಕ್ಕಾಚಾರ, ಮಾರಾಟ ತಂತ್ರಗಳು ಹಾಗೂ ತಂಡಕಾರ್ಯದಂತಹ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಯುವ ಅವಕಾಶ ಪಡೆಯಲಿದ್ದಾರೆ.ಈ ಕಾರ್ನಿವಲ್ ಕೇವಲ ವ್ಯಾಪಾರ ಮೇಳವಲ್ಲದೆ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಮನೋಭಾವ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಶಿಕ್ಷಣಾತ್ಮಕ ವೇದಿಕೆಯಾಗಿದೆ. ಜೊತೆಗೆ ಪೆÇೀಷಕರು, ಸ್ಥಳೀಯರು ಮತ್ತು ಅತಿಥಿಗಳಿಗೆ ಮನರಂಜನೆ ಹಾಗೂ ಖರೀದಿಯ ಅನುಭವ ಒದಗಿಸುವ ಉತ್ಸವವಾಗಲಿದೆ.

ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೆÇೀಷಕರ ಸಹಕಾರದೊಂದಿಗೆ ನಡೆಯುವ ಈ ಮೇಳವು ಸಮುದಾಯದೊಂದಿಗೆ ಶಾಲೆಯ ನಂಟನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. "ಅನುಭವದ ಮೂಲಕ ಕಲಿಕೆ" ಎಂಬ ಶಿಕ್ಷಣ ತತ್ವವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ದಿಕ್ಕಿನಲ್ಲಿ ಪೀಸ್ ಕ್ರಿಯೇಟಿವ್ ಶಾಲೆ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸಂದರ್ಭ ಎಸ್‍ಕೆಜಿ ವಿದ್ಯಾರ್ಥಿಗಳಿಗಾಗಿ ಪದವಿ ಪ್ರದಾನ ಸಮಾರಂಭ, ವೇದಿಕೆಯಲ್ಲಿ ಹೃದಯಸ್ಪರ್ಶಿ ಆಚ್ಚರಿ ಕ್ಷಣ, ಸಾಂಸ್ಕøತಿಕ ಕಾರ್ಯಕ್ರಮಗಳು

ಸಾಂಪ್ರದಾಯಿಕ ಆಟಗಳು, ಆಟದ ಮೈದಾನ ಉಪಕರಣಗಳೊಂದಿಗೆ ಪ್ಲೇ ಝೋನ್

ವಿಜ್ಞಾನ ಯೋಜನೆಗಳ ಪ್ರದರ್ಶನ, ಅರಬಿಕ್ ಹಾಗೂ ಇಸ್ಲಾಮಿಕ್ ಸಾಂಸ್ಕೃತಿಕ ಪರಂಪರೆ ನಡೆಯಲಿರುವುದಾಗಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಅರಿಮಲ, ಪ್ರಾಂಶುಪಾಲ ಅಬ್ದುಲ್ ಖಾದರ್, ಅಧ್ಯಾಪಕ ಉಸ್ಮಾನ್ ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries