ಮಧೂರು: ಕಳೆದ 50 ವರ್ಷಗಳಿಂದ ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಶೈಕ್ಷಣಿಕ ಕ್ರೀಡಾ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಗೊಂಡಿರುವ ಮಿತ್ರ ಕಲಾ ವೃಂದದ ಸುವರ್ಣ ಮಹೋತ್ಸವದ ಆಚರಣಾ ಸಿದ್ಧತಾ ಸಭೆ ಜರಗಿತು. ಮಿತ್ರ ಕಲಾ ವೃಂದದ ಸರ್ವ ಸದಸ್ಯರು ಹಿತೈಷಿಗಳು, ಸ್ಥಳೀಯ ಗಣ್ಯರು ಮಧೂರು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಜರಗಿದ ಸಭೆಯಲ್ಲಿ ಭಾಗವಹಿಸಿದರು.
ಸಭೆಯನ್ನು ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಉದ್ಘಾಟಿಸಿದರು. ಕಲಾ ವೃಂದದ ಅಧ್ಯಕ್ಷ ಚಂದ್ರಗೋಪಾಲ ಅಧ್ಯಕ್ಷತೆ ವಹಿಸಿದ್ದರು, ಮಧೂರು ಗ್ರಾಮ ಪಂಚಾಯತಿ ಸದಸ್ಯರಾದ ಯೋಗೀಶ್ ಎಂ.ಆರ್., ಶಮೀಮಾ ಶರೀಫ, ಸಂಘದ ಹಿರಿಯ ಸದಸ್ಯ ಚಂದ್ರಹಾಸ ಮಧೂರು, ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಭಾಶಂಕರ ಮಾಸ್ತರ್, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನವೀನ್ ಎಲ್ಲಂಗಳ, ಸ್ಮಜಾ ವಿನೋದ್ ಶುಭ ಹಾರೈಸಿದರು. ಸುವರ್ಣ ಮಹೋತ್ಸವದ ಯಶಸ್ವಿಗೆ ಸ್ವಾಗತ ಸಮಿತಿ ರೂಪಿಕರಿಸಲಾಯಿತು. ಚಂದ್ರಗೋಪಾಲ ಅಧ್ಯಕ್ಷತೆ ವಹಿಸಿ ಮಿತ್ರಕಲಾವೃಂದ ಬೆಳೆದು ಬಂದ ಬಗ್ಗೆಯನ್ನು ಮತ್ತು ಸುವರ್ಣ ಮಹೋತ್ಸವ ಆಚರಣೆಯ ಕುರಿತು ವಿವರಿಸಿದರು. ಕೋಶಾಧಿಕಾರಿ ಸುಜಿತ್ ಆಚರಣಾ ಸಮಿತಿ ಪದಾಧಿಕಾರಿಗಳ ಹೆಸರು ವಾಚಿಸಿದರು. ಕಾರ್ಯದರ್ಶಿ ಮಧುಕರ ಗಟ್ಟಿ ಸ್ವಾಗತಿಸಿ, ಮಹೇಶ್ ಮಧೂರು ವಂದಿಸಿದರು. ಧನಂಜಯ ಮಧೂರು ಕಾರ್ಯಕ್ರಮ ನಿರೂಪಿಸಿದರು.

.jpg)
