ಮಂಜೇಶ್ವರ: ಇತಿಹಾಸ ಪ್ರಸಿದ್ಧ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆಯು ಫೆ. 15 ರಂದು ಭಾನುವಾರ ಜರಗಲಿದೆ. ಮಧ್ಯಾಹ್ನ ಮಹಾಪೂಜೆ, ವಿಶೇಷ ಬಲಿವಾಡುಕೂಟ ಹಾಗೂ ರಾತ್ರಿ ಶಿವರಾತ್ರಿ ಜಾಗರಣೆ, ವಿಶೇಷ ಜಾಮ ಪೂಜೆಗಳು ಹಾಗೂ ನಾಡಿನ ವಿವಿಧ ಭಜನಾ ತಂಡಗಳಿಂದ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಭಜನಾ ಕಾರ್ಯಕ್ರಮ ಜರಗಲಿದೆ ಎಂದು ಕ್ಷೇತ್ರ ಪ್ರಕಟಣೆ ತಿಳಿಸಿದೆ.

