HEALTH TIPS

ನಿರ್ಮಾಣ ಕಾರ್ಮಿಕರ 16 ತಿಂಗಳ ಪಿಂಚಣಿ, ಸೌಲಭ್ಯ ಶೀಘ್ರ ವಿತರಿಸಲು ಸರಕಾರ ಮುಂದಾಗಬೇಕು-ಎಐಟಿಯುಸಿ

 ಕಾಸರಗೋಡು: ಕೇರಳದಲ್ಲಿ ಕಾರ್ಮಿಕರ ಹಾಗೂ ಕುಟುಂಬಗಳ ಸಾಮಾಜಿಕ ಸುರಕ್ಷತೆಯನ್ನು ಖಚಿತಪಡಿಸಲು ಜ್ಯಾರಿಗೆ ತರಲಾದ ನಿರ್ಮಾಣ ಕಾರ್ಮಿಕರ ಕ್ಷೇಮ ನಿಧಿ ಮಂಡಳಿಯನ್ನು ಸರಕಾರ ಸಂರಕ್ಷಿಸಬೇಕೆಂದು ಕನ್‌ಸ್ಟ್ರಕ್ಷನ್ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಜಿಲ್ಲಾ  ಸಮ್ಮೇಳನ ಒತ್ತಾಯಿಸಿದೆ. 


16 ತಿಂಗಳ ಪಿಂಚಣಿ ವಿತರಣೆಯಾಗಿಲ್ಲ. ಒಂದು ವರ್ಷದಿಂದ ಸೌಲಭ್ಯ, ಅರ್ಜಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಕೇರಳ ರಾಜ್ಯೋದಯ ದಿನದಂದು ಮುಖ್ಯಮಂತ್ರಿ ತನ್ನ ಭಾಷಣದಲ್ಲಿ ಈ ಪಿಂಚಣಿ  ವಿತರಣೆಗಾಗಿ 950 ಕೋಟಿ ರೂಪಾಯಿ ಮೀಸಲಿಡುವುದಾಗಿ ತಿಳಿಸಿದ್ದರು.

ಅದರ ಮೇಲೆ ಕಾರ್ಮಿಕರು ನಿರೀಕ್ಷೆಯಿರಿಸಿದ್ದಾರೆ. ಆದ್ದರಿಂದ ಪಿಂಚಣಿ ಸಹಿತ ಇತರ ಸೌಲಭ್ಯ ಗಳನ್ನು ಕೂಡಲೇ ವಿತರಿಸಬೇಕೆಂದು ಸಮ್ಮೇಳನ ಒತ್ತಾಯಿಸಿದೆ. ಸಮ್ಮೇಳನವನ್ನು ಎಐಸಿಬಿಸಿ ಡಬ್ಲ್ಲ್ಯು ಪ್ರಧಾನ ಕಾರ್ಯದರ್ಶಿ ವಿಜಯನ್ ಕುನಿಶ್ಶೇಯೇರಿ ಉದ್ಘಾಟಿಸಿದರು. ಫೆಡರೇಶನ್ ಜಿಲ್ಲಾಧ್ಯಕ್ಷ ಕೆ.ವಿ. ಕೃಷ್ಣನ್ ಧ್ವಜಾರೋಹಣಗೈದರು. ಕೆ.ವಿ. ಕೃಷ್ಣನ್, ಕೆ. ರಾಮ್‌ದಾಸ್, ಪಿ.ಪಿ. ಚಾಕೋ, ಟಿ.ಡಿ. ಜೋನಿ, ಬಿ. ಸುಕುಮಾರನ್ ಮೊದಲಾದವರು ನೇತೃತ್ವ ನೀಡಿದರು. ಫೆಡರೇಶನ್ ಜಿಲ್ಲಾ ಸೆಕ್ರೆಟರಿ ಬಿಜು ಉಣ್ಣಿತ್ತಾನ್, ರಮೇಶನ್ ಕಾಸರಗೋಡು, ತುಳಸೀಧರನ್ ಠರಾವು ಮಂಡಿಸಿದರು. ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಪಿ. ಮುರಳಿ ವರದಿ ಮಂಡಿಸಿದರು.  ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪಿಲ್, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಕೃಷ್ಣನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು, ಜಿಲ್ಲಾ ಅಸಿಸ್ಟೆಂಟ್ ಸೆಕ್ರೆಟರಿ ವಿ. ರಾಜನ್ ಮೊದಲಾದವರು ಮಾತನಾಡಿದರು. ಫೆಡರೇಶನ್ ಹಿರಿಯ ನೇತಾರರಾದ ಪಿ.ಎನ್.ಆರ್ ಅಮ್ಮಣ್ಣಾಯ, ಎಂ. ಸಂಜೀವ ಶೆಟ್ಟಿ ಎಂಬಿವರನ್ನು ಎಐಸಿಬಿಸಿಡಬ್ಲ್ಯು ಪ್ರಧಾನ ಕಾರ್ಯದರ್ಶಿ   ವಿಜಯನ್ ಕುನಿಶ್ಶೇರಿ ಶಾಲು ಹೊದಿಸಿ ಗೌರವಿಸಿದರು.

ಫೆಡರೇಶನ್‌ನ ನೂತನ ಜಿಲ್ಲಾಧ್ಯಕ್ಷರಾಗಿ ಕೆ.ವಿ. ಕೃಷ್ಣನ್, ಕಾರ್ಯದರ್ಶಿಯಾಗಿ ಬಿಜು ಉಣ್ಣಿತ್ತಾನ್, ಉಪಾಧ್ಯಕ್ಷರಾಗಿ ಪಿ.ಪಿ. ಚಾಕೋ, ಕೆ. ಚಂದ್ರಶೇಖರ ಶೆಟ್ಟಿ, ಸಿ.ಕೆ. ಬಾಬುರಾಜ್, ಟಿ.ಡಿ. ಜೋನಿ, ಜತೆ ಕಾರ್ಯದರ್ಶಿಗಳಾಗಿ ರಾಮ್‌ದಾಸ್ ಕೆ, ಕೆ. ಶಾಂಗಾರ್ಧರನ್,  ರಮೇಶನ್ ಕಾರ್ಯಂಗೋಡು, ಎಂ. ಗಣೇಶನ್, ಕೋಶಾಧಿಕಾರಿಯಾಗಿ ತುಳಸೀಧರನ್ ಎಂಬಿವರನ್ನು ಆರಿಸಲಾಯಿತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries