ಪೆರ್ಲ: ವಿದೇಶದಿಂದ ಆಗಮಿಸಿದ್ದ ವ್ಯಕ್ತಿಯ ಮೃತದೇಹ ಮನೆ ಸನಿಹದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೆರ್ಲ ನಿವಾಸಿ ಚಂದ್ರಾವತೀ ಆಚಾರ್ಯ- ದಿ. ಅಪ್ಪಯ್ಯ ಆಚಾರ್ಯ ದಂಪತಿ ಪುತ್ರ ವೆಂಕಟರಮಣ ಆಚಾರ್ಯ(49)ಮೃತಪಟ್ಟವರು. ಪೆರ್ಲದಲ್ಲಿ ಟೈಲರಿಂಗ್ ವೃತ್ತಿ ನಡೆಸುವ ಮೂಲಕ ಜನಾನುರಾಗಿಯಾಗಿದ್ದ ಇವರು, ಬೆಂಗಳೂರು, ಮುಂಬಯಿ, ತಮಿಳ್ನಾಡು ಸೇರಿದಂತೆ ವಿವಿಧೆಡೆ ಕೆಲಸ ನಿರ್ವಹಿಸಿ ಎರಡು ವರ್ಷದ ಹಿಂದೆ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿದ್ದರು. ದಿವಸಗಳ ಹಿಂದೆಯಷ್ಟೆ ವಿದೇಶದಿಂದ ಊರಿಗೆ ವಾಪಸಾಗಿದ್ದ ಇವರು, ಬುಧವಾರ ದೇವಸ್ಥಾನವೊಂದಕ್ಕೆ ಕುಟುಂಬ ಸಮೇತ ಸಂದರ್ಶಿಸಿ ವಾಪಸಾಗಿದ್ದರು. ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಇವರು ಗುರುವಾರ ಬೆಳಗಿನ ವಿಹಾರ ತೆರಳುವ ರೀತಿಯಲ್ಲಿ ಮನೆಯಿಂದ ಹೊರಟಿದ್ದು, ಬಹಳ ಹೊತ್ತಿನ ವರೆಗೂ ವಾಪಸಾಗದಿರುವುದರಿಂದ ಹುಡುಕಾಟುವ ಮಧ್ಯೆ ಮೃತದೇಹ ಪತ್ತೆಯಾಗಿದೆ. ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು.


