ಕಾಸರಗೋಡು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಗೃಹಿಣಿ ಹಾಗೂ ಇಬ್ಬರು ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ ಒಬ್ಬಾಕೆ ಯುವತಿ ತನ್ನ ಪ್ರಿಯತಮನ್ನು ವರಿಸಿದ ನಂತರ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ.
ವೆಳ್ಳರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋಂ ಅದಿರ್‍ಮಾವ್ ನಿವಾಸಿ ಪಿ.ಕೆ ಮಧು ಎಂಬವರ ಪುತ್ರಿ ಬೀನಾ(19)ಪರಾರಿಯಾಗಿದ್ದು, ನಂತರ ಈತನ ಪ್ರಿಯತಮ ರಂಜಿತ್ ಜತೆ ವಿವಾಹವಾಗಿ ಠಾಣೆಗೆ ಹಾಜರಾಗಿದ್ದಾಳೆ. ಬೀನಾ ಮಂಗಳವಾರ ನಾಪತ್ತೆಯಗಿರುವ ಬಗ್ಗೆ ತಂದೆ ಮಧು ದೂರು ನೀಡಿದ್ದು, ಹುಡುಕಾಡುವ ಮಧ್ಯೆ ಬುಧವಾರ ಪ್ರಿಯತಮನ ಜತೆ ಠಾಣೆಗೆ ಶರಣಾಗಿದ್ದಾಳೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸ್ವ ಇಚ್ಛೆಯಂತೆ ನಡೆದುಕೊಳ್ಳಲು ನಿರ್ದೇಶಿಸಿದ ಹಿನ್ನೆಲೆಯಲ್ಲಿ ಬೀನಾ ತನ್ನ ಪ್ರಿಯಮನ ಜತೆ ತೆರಳಿದ್ದಾಳೆ.
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಂಜಿಕಲ್ಲು ನಿವಾಸಿ ಲಲಿತಾ ಎಂಬವರ ಪುತ್ರಿ ಪ್ರೇಮಾ(35)ತನ್ನ ಇಬ್ಬರು ಮಕ್ಕಳನ್ನುಬಿಟ್ಟು, ಹಾಸನ ನಿವಾಸಿ ಹಾಗೂ ಪ್ರಿಯತಮ ಹರೀಶ್ ಜತೆ ಪರಾರಿಯಾಗಿದ್ದಾಳೆ. ಸುಳ್ಯಕ್ಕೆ ತೆರಳುವುದಾಗಿ ಮನೆಯಿಂದ ಹೊರಟವಳು ಮನೆಗೆ ವಾಪಸಾಗದಿರುವ ಬಗ್ಗೆ ತಾಯಿ ಲಲಿತಾ ದೂರು ನೀಡಿದ್ದರು. ಹುಡುಕಾಟ ನಡೆಸುವ ಮಧ್ಯೆ, ಪ್ರೇಮಾ ಠಾಣೆಗೆ ಕರೆಮಾಡಿ, ತಾನು ಹರೀಶ್ ಜತೆ ಇರುವುದಾಗಿ ತಿಳಿಸಿರುವುದಾಗಿ ಪೊಲೀಸರುಮಾಹಿತಿ ನೀಡಿದ್ದಾರೆ.
ಇನ್ನೊಂದುಪ್ರಕರಣದಲ್ಲಿ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಚೆಮ್ಮಟ್ಟಂವಯಲ್ ಪುದಿಯಪುರಕ್ಕಲ್ ನಿವಾಸಿ ಸುನಿಲ್ ಲಾರೆನ್ಸ್ ಎಂಬವರ ಪುತ್ರಿ ಅಲಿನಾ(22)ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೆಲಸಕ್ಕೆಂದು ಮನೆಯಿಂದ ಹೊರಟವಳು ವಾಪಸಾಗದಿರುವ ಬಗ್ಗೆ ತಂದೆ ಸುನಿಲ್ ಲಾರೆನ್ಸ್ ಪೊಲೀಸರಿಗೆ ದೂರು ನೀಡಿದ್ದರು. ಈಕೆಪಾಲಕ್ಕಾಡ್ ನಿವಾಸಿ ಸಂದೀಪ್ ಜೊತೆ ತೆರಳಿರುವ ಬಗ್ಗೆ ಸುನಿಲ್‍ಲಾರೆನ್ಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

