ಮಂಜೇಶ್ವರ : ವಸತಿಗೃಹದಲ್ಲಿದ್ದ ಜೋಡಿಯನ್ನು ಬೆದರಿಸಿ, ಅವರ ಅರೆನಗ್ನ ಚಿತ್ರ ತೆಗೆಸಿ ನೈತಿಕ ಪೊಲೀಸ್ ಗೂಡಾಗಿರಿ ತೋರಿಸಿರುವುದಲ್ಲದೆ, ನಂತರ ಬಂಧಿಸಲು ತೆರಳಿದ್ದ ಮಹಿಳಾ ಪೆÇಲೀಸ್ ಸಿಬಂದಿಯ ಕೈಬೆರಳಗೆ ಗಾಯಗೊಳಿಸಿ ಪರಾರಿಯಾಗಿದ್ದ ಆರೋಪಿಯನ್ನು ಮಂಜೇಶ್ವರ ಠಾಣೆ ಇನ್ಸ್‍ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಮಂಗಳೂರು ಕಲ್ಲಾಪುವಿನಿಂದ ಬಂಧಿಸಿದೆ.
ಮಂಜೇಶ್ವರ ಹೊಸಬೆಟ್ಟು ನಿವಾಸಿ ಮೊಯ್ದೀನ್ ಸಮಾನ್(33)ಬಂಧಿತ. ಮಂಜೇಶ್ವರ ಹೊಸಂಗಡಿಯ ವಸತಿಗೃಹವೊಂದರಲ್ಲಿ ಫೆ. 14ರಂದು ಘಟನೆ ನಡೆದಿದೆ. ಹೊಸಂಗಡಿಯ ವಸತಿಗೃಹಕ್ಕೆ ಅನಧಿಕೃತವಾಗಿ ನುಗ್ಗಿ, ಉಳ್ಳಾಲ ಕೈರಂಗಳ ನಿವಾಸಿ ಮುಹ್ಮದ್ ಹನೀಫ(44) ಹಾಗೂ ದ. ಕ ಜಿಲ್ಲೆಯ ನಿವಾಸಿಯಾದ 30ರ ಮಹಿಳೆಯನ್ನು ಮೊಯ್ದೀನ್ ಸಮಾನ್ ಹಾಗೂ ಈತನ ತಂಡ ಹಣಕ್ಕಾಗಿ ಬೆದರಿಕೆಯೊಡ್ಡಿ ಅಶ್ಲೀಲ ದೃಶ್ಯ ಚಿತ್ರೀಕರಿಸಿತ್ತು. ಎರಡು ಲಕ್ಷ ರೂ. ನೀಡದಿದ್ದರೆ ವೀಡಿಯೋ ಮತ್ತು ಫೆÇೀಟೋ ಸಾಮಾಝಿಕ ಜಾಲತಾಣದಲ್ಲಿ ಪ್ರಚಾರ ಮಾಡುವುದಾಗಿ ಬೆದರಿಸಿತ್ತು. ಇಷ್ಟೊಂದು ಹಣ ಇಲ್ಲದಿದ್ದಾಗ, ಅವರ ವಶವಿದ್ದ ಐದು ಸಾವಿರ ರೂ ನಗದು, ಮೊಬೈಲ್ ಫೆÇೀನು ಅಪಹರಿಸಿ ತಂಡ ಪರಾರಿಯಾಗಿತ್ತು. ಈ ಬಗ್ಗೆ ಮೊಯ್ದೀನ್ ಸಮಾನ್ ಮಂಜೇಶ್ವರ ಪೆÇಲೀಸರಿಗೆ ದೂರು ನೀಡಿದ್ದರು.
ಆರೋಪಿಗಳು ಮಂಗಳೂರಲ್ಲಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಬಂಧನಕ್ಕೆಂದು ತೆರಳಿದ್ದ ಮಹಿಳಾ ಪೆÇಲೀಸ್ ಸಿಬಂದಿಯ ಕೈಬೆರಳು ತಿರುವಿ ಗಾಯಗೊಳಿಸಿ ಮೊಯ್ದೀನ್ ಅಂದು ಪರಾರಿಯಾಗಿದ್ದನು. ಈತನ ಜತೆಗಿದ್ದ ಸಹಚರರಾದ ಮಂಜೇಶ್ವರ ಪಿಡಾರರ್ ಮೂಲೆಯ ಹಾರಿಸ್ (40) ಹಾಗೂ ಬಡಾಜೆಯ ಕಾಜೂರುಮಲೆ ನಿವಾಸಿ ಮುಹ್ಮದ್ ಫೈಸರ್ (43) ಎಂಬವರನ್ನು ಬಂಧಿಸಲಾಗಿತ್ತು.

