ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 1ರಿಂದ 5ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಹಾಗೂ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ವಿವಿಧ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಭಜನೆ ನಡೆಯುವುದು.
ಫೆ. 1ರಂದುಬೆಳಗ್ಗೆ ಗಣಪತಿ ಹವನ, ಧ್ವಜಾರೋಹಣ, ನವಕಾಭಿಷೇಕ, 10ಕ್ಕೆ ಸುಮಶ್ರೀ ಮತ್ತುಬಳಗದವರಿಂದ ಭಕ್ತಿಗಾನ,11ಕ್ಕೆ ಅನ್ವಿತಾ ಶೇಣಿ ಅವರಿಂದ 'ನಾದವಲ್ಲರಿಕ ರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಯಲಿನ್ ವಾದನ ನಡೆಯುವುದು. 11.30ಕ್ಕೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರ ವಠಾರದಿಂದ ದೇವಸ್ಥಾನಕ್ಕೆ ಹಸಿರುವಾಣಿ ಸಮರ್ಪಣೆಯ ಭವ್ಯ ಮೆರವಣಿಗೆ ನಡೆಯುವುದು. ಮಧ್ಯಾಹ್ನ 1.30ಕ್ಕೆ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ 8ಕ್ಕೆ ವಿಜಯಕುಮಾರ್ ಕೊಡಿಯಾಲಬೈಲ್ ನಿರ್ದೇಶನದಲ್ಲಿ 'ಶಿವದೂತೆ ಗುಳಿಗೆ' ವಿಭಿನ್ನಶೈಲಿಯ ನಾಟಕ ಪ್ರದರ್ಶನಗೊಳ್ಳುವುದು.
ಫೆ.2ರಂದು ಬೆಳಗ್ಗೆ 108 ಕಾಯಿ ಗಣಪತಿ ಹವನ, ಭಕ್ತಿ ಗಾನಸುಧಾ, ಮಧ್ಯಾಹ್ನ 2ರಿಂದ ಡಾ.ವಾಣಿಶ್ರೀ ಸಾರಥ್ರ್ಯದ ಗಡಿನಾಡ ಕನ್ನಡ ಸಾಂಸ್ಕøತಿಕ ಸಂಸ್ಥೆಯಿಂದ ಸಾಹಿತ್ಯ ಗಾನ ವೈಭವ, ರಾತ್ರಿ 8ಕ್ಕೆ ಪೆರ್ಲದ ಶಿವಾಂಜಲಿ ಕಲಾ ಕೇಂದ್ರ ವತಿಯಿಂದ ನೃತ್ಯ ಪಲ್ಲವ ಭರತ ನಾಟ್ಯ-ಜಾನಪದ ನೃತ್ಯ ಕಾರ್ಯಕ್ರಮ ನಡೆಯುವುದು. 3ರಂದು ಬೆಳಗ್ಗೆ 6ಕ್ಕೆ ಚಂಡಿಕಾ ಹವನ ಆರಂಭ, 11ಕ್ಕೆ ಪೂರ್ಣಾಹುತಿ, ತುಲಾಭಾರ ಸೇವೆ, ಸಂಜೆ 6ಕ್ಕೆ ಕಜಂಬು ಉತ್ಸವ, 8ಕ್ಕೆ ಶ್ರೀ ಉಳ್ಳಾಲ್ತೀ ಭಂಡಾರ ಹೊರಡುವುದು, ಶ್ರೀ ಉಳ್ಳಾಲ್ತೀ ಅಶ್ವರಥ ಸವಾರಿ, ಶ್ರೀಉಳ್ಳಾಲ್ತೀ ನೇಮ ನಡೆಯುವುದು.
ಫೆ. 4ರಂದು ಬೆಳಗ್ಗೆ 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 6ಕ್ಕೆ ತಿರುವಾದಿರ, 7ಕ್ಕೆ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದಿಂದ 'ಆಕರ್ಷಣ' ಭರತ ನಾಟ್ಯ, ರಾತ್ರಿ 8ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹೊರಡುವುದು, 8.30ಕ್ಕೆತೊಡಙಳ್, ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯುವುದ. 5ರಂದುಬೆಳಗ್ಗೆ 9ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಮಧ್ಯಾಹ್ನ 12.30ಕ್ಕೆ ಧ್ವಜಾವರೋಹಣ ನಡೆಯುವುದು.


