ಕಾಸರಗೋಡು: ಜಿಲ್ಲೆಯ ವೈದ್ಯಕೀಯ ವಲಯದ ಹಿಂದುಳಿದಿರುವಿಕೆಗೆ ಪರಿಹಾರವಾಗಿ ಏಮ್ಸ್ ಸ್ಥಾಪನೆ ಎಂಬ ಜನಪ್ರಿಯ ಬೇಡಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಫೆಬ್ರವರಿ 2 ಮತ್ತು 3 ರಂದು 'ಏಮ್ಸ್ ಕಾಸರಗೋಡು ಜನಪರ ಒಕ್ಕೂಟ' ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಬೃಹತ್ ವಾಹನ ಪ್ರಚಾರ ಜಾಥಾ ಆಯೋಜಿಸಲಾಗುವುದಾಗಿ ಒಕ್ಕೂಟ ಅಧ್ಯಕ್ಷ ಖಾದರ್ ಮಾಂಗಾಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಳಿಯಾರು ಪಂಚಾಯಿತಿಯ ಬೋವಿಕ್ಕಾನ ಪೇಟೆಯಲ್ಲಿ ಫೆ. 2ರಂದು ಬೆಳಗ್ಗೆ 10ಕ್ಕೆ ಆರಂಭಗೊಳ್ಳುವ ವಾಹನ ಪ್ರಚಾರ ಜಾಥಾವನ್ನು ಪ್ರಸಿದ್ಧ ಶಿಲ್ಪಿ, ಕಾನಾಯಿ ಕುಞÂರಾಮನ್
ಉದ್ಘಾಟಿಸುವರು. ವಿವಿಧ ಕೇಂದ್ರಗಳಲ್ಲಿ ಸ್ವಾಗತ ನಂತರ ಫೆ.3ರಂದು ಸಂಜೆ 5 ಗಂಟೆಗೆ ತ್ರಿಕರಿಪುರದಲ್ಲಿ ಮೆರವಣಿಗೆ ಸಮಾರೋಪಗೊಳ್ಳಲಿದೆ. ಜಿಲ್ಲೆಯ ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ವಲಯದ ಮುಖಂಡರು ಜಾಥಾದಲ್ಲಿ ಪಾಲ್ಗೊಳ್ಳುವರು.
ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ ಪ್ರದೇಶ ಮುಳಿಯಾರಿನಿಂದ ಜಿಲ್ಲೆಯ ದಕ್ಷಿಣ ತುದಿಯ ತ್ರಿಕರಿಪುರದವರೆಗೆ ಜಾಥಾ ನಡೆಯಲಿದೆ. 'ಕಾಸರಗೋಡಿನ ಹೋರಾಟದ ಕಹಳೆ, ಹೋರಾಟ ಮುಂದುವರಿಯುತ್ತದೆ-ಏಮ್ಸ್ ಸಾಧಿಸಲಾಗುವುದು' ಎಂಬ ಘೋಷಣೆಯೊಂದಿ ಪ್ರತಿಭಟನಾ ಗುಂಪು ಬೀದಿಗಿಳಿಯುತ್ತಿದೆ.
ಜಾಥಾ ಮೊದಲ ದಿನ ಬೋವಿಕ್ಕಾನ, ಪೆರ್ಲ, ಮಂಜೇಶ್ವರಂ ಗೋವಿಂದ ಪೈ ಕಾಲೇಜು, ಕುಂಬಳೆ, ಕಾಸರಗೋಡು, ಕೀಯೂರು ಮಾರ್ಗವಾಗಿ ಪಾಲಕ್ಕುನ್ನು, ಎರಡನೇ ದಿನ ಪುಲ್ಲೂರು ಪೆರಿಯ, ಕಳ್ಳಾರ್, ಅಂಬಲತ್ತರ, ಕಾಞಂಗಾಡು, ನೀಲೇಶ್ವರ, ಚೆರುವತ್ತೂರು, ಪಡನ್ನ ಮೂಲಕ ಸಾಗಿ ತೃಕರಿಪುರದಲ್ಲಿ ಸಮಾರೋಪಗೊಳ್ಳಲಿದೆ.
ಎಂಡೋಸಲ್ಫಾನ್ ಪೀಡಿತರು ಸೇರಿದಂತೆ ಸಾವಿರಾರು ಮಂದಿ ರೋಗಿಗಳು ಇನ್ನೂ ತಜ್ಞರ ಚಿಕಿತ್ಸೆಗಾಗಿ ಇತರ ಜಿಲ್ಲೆ ಹಾಗೂ ರಾಜ್ಯಗಳನ್ನು ಅವಲಂಬಿಸಬೇಕಾದ ಸಥಿತಿ ಬದಲಾಯಿಸುವುದು, ಕಾಸರಗೋಡು ಜಿಲ್ಲೆಯಲ್ಲಿಯೇ ಏಮ್ಸ್‍ಗೆ ಅವಕಾಶ ನೀಡುವ ಬಗ್ಗೆ ಒತ್ತಾಯಿಸುವುದು ಹೋರಾಟದ ಪ್ರಾಥಮಿಕ ಉದ್ದೇಶವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಪದಾಧಿಕಾರಿಗಳಾದ ಕೆ ಶ್ರೀಕಾಂತ್, ಶ್ರೀನಾಥ್ ಶಶಿ, ಗಣೇಶ್ ಅರಮಂಗಾನಂ, ಸಲೀಂ ಚೌಕಿ ಉಪಸ್ಥಿತರಿದ್ದರು.


