ಕಾಸರಗೋಡು: 'ಸ್ಪಿಕ್ ಮೆಕೇ' ಕಾಸರಗೋಡು ಅಧ್ಯಾಯದ ಆಶ್ರಯದಲ್ಲಿ, ಖ್ಯಾತ ಮಣಿಪುರಿ ಶಾಸ್ತ್ರೀಯ ನೃತ್ಯಪಟು ಸಿನಮ್ ಬಸು ಸಿಂಗ್ ಅವರ ನೇತೃತ್ವದಲ್ಲಿ ಮಣಿಪುರಿ ವೈಜ್ಞಾನಿಕ ಸಮ್ಮೇಳನವನ್ನು ಆಯೋಜಿಸಲಾಯಿತು.
ಜನವರಿ 30 ರಂದು ಕಾಸರಗೋಡಿನ ಚಿನ್ಮಯ ವಿದ್ಯಾಲಯ ತೇಜಸ್ ಸಭಾಂಗಣದಲ್ಲಿ ನೃತ್ಯ ಪ್ರದರ್ಶನ ನಡೆಯಿತು. ನಂತರ ಮಣಿಪುರಿ ಶಾಸ್ತ್ರೀಯ ನೃತ್ಯದ ಮೂಲ ಚಲನೆಗಳು ಮತ್ತು ಅಭಿವ್ಯಕ್ತಿಗಳನ್ನು ಪ್ರಸ್ತುತಪಡಿಸಲಾಯಿತು. ಮಕ್ಕಳು ನೃತ್ಯದ ಸರಳತೆ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯವನ್ನು ನೇರವಾಗಿ ಅನುಭವಿಸುವ ರೀತಿಯಲ್ಲಿ ಪ್ರಸ್ತುತಿ ಣನಡೆಯಿತು. ಭಾರತದ ಶ್ರೀಮಂತ ಸಾಂಸ್ಕøತಿಕ ಪರಂಪರೆಯೊಂದನ್ನು ವಿದ್ಯಾರ್ಥಿಗಳ ಬಳಿ ತಲುಪಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಶಾಲಾ ಪ್ರಾಂಶುಪಾಲ ಟಿ.ವಿ. ಸುಕುಮಾರನ್, ಮುಖ್ಯ ಶಿಕ್ಷಕರಾದ ಪೂರ್ಣಿಮಾ ಎಸ್.ಆರ್., ಸಿಂಧು ಶಶೀಂದ್ರನ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಣಿಪುರಿ ಶಾಸ್ತ್ರೀಯ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು.


