HEALTH TIPS

ಕನ್ನಡ ಗ್ರಾಮದಲ್ಲಿ ಕಾಸರಗೋಡು ಗೋ-ಕುಟೀರದ ನಿರ್ಮಾಣಕ್ಕೆ ಚಾಲನೆ, ಗೋಸೇವೆಗೆ ವ್ಯವಸ್ಥೆ

ಕಾಸರಗೋಡು: ಕೂಡ್ಲು ಪಾರೆಕಟ್ಟ ಕನ್ನಡಗ್ರಾಮದ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ(ರಿ)ದ ವತಿಯಿಂದ ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಕಾಸರಗೋಡು ಗೋ-ಕ್ಷೇತ್ರ- ಗೋ-ಕುಟೀರವನ್ನು ಸಾರ್ವಜನಿಕರು ಹಾಗೂ ಗೋ ಭಕ್ತರ ಸಹಕಾರದಿಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಬೃಹತ್ ಕಾರ್ಯಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, "ಹೊರೆಕಾಣಿಕೆ-ಹಸಿರು ವಾಣಿ" ಮಾದರಿಯಲ್ಲಿ ದಿನನಿತ್ಯ ಗೋ ಸೇವೆಯನ್ನು ಸಲ್ಲಿಸುವ ಮೂಲಕ ಗೋ- ಸೇವಾ ಅಭಿಯಾನ ಆರಂಭಿಸಲು ಮುಂದಾಗಿದೆ ಎಂದು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು  ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಗೋ- ಭಕ್ತರ ಕುಟುಂಬಸ್ಥರ ಮಕ್ಕಳಿಗೆ ದೇಸಿ ಗೋವಿನ ಹಾಲಿನ ಬಳಕೆಯ ಉದ್ದೇಶದಿಂದ ಹಿಂದು ಸಮಾಜದ ಪ್ರತಿ ಕುಟುಂಬದವರು,ಕ್ಷೇತ್ರಗಳು, ಮಠ, ಮಂದಿರ, ದೈವಸ್ಥಾನ, ದೇವಸ್ಥಾನಗಳ ಧಾರ್ಮಿಕ ಉತ್ಸವ ಕಾರ್ಯಕ್ರಮಗಳಿಗೆ ಗೋಮೂತ್ರ, ಪಂಚಗವ್ಯ ಹಾಗೂ  ಗೋ-ಸಗಣಿ ಗೋಮಯ ಪೂಜಾ ಇತ್ಯಾದಿ ಅವಶ್ಯಕತೆ ಇರುವವರಿಗೆ,  ಕಾಸರಗೋಡು  "ಗೋ-ಕುಟೀರ"ದಲ್ಲಿ ದಿನನಿತ್ಯ ನಿರಂತರವಾಗಿ ದೊರಕುವಂತೆ ಮಾಡಲು ಉದ್ದೇಶಿಸಲಾಗಿದೆ.

2025 ರ ದೀಪಾವಳಿ ಹಬ್ಬದ ಗೋ ಪೂಜೆಯ ದಿನದಂದು ಗೋ ಸಂಭ್ರಮವನ್ನು ಶ್ರದ್ಧಾ ಪೂರ್ವಕವಾಗಿ ಆಚರಿಸಿ ಗೋ- ಸಂಕಲ್ಪ ಮಾಡಲಾಯಿತು.

ಗೋ-ಕುಟೀರದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಗೋವುಗಳಿಗೆ ಸ್ನಾನ ಮಾಡಿಸಿ ಗೋ ಗ್ರಾಸ ನೀಡಲಿಚ್ಚಿಸುವ ಗೋ ಸೇವಾ ಭಕ್ತರ ಕುಟುಂಬಸ್ಥರಿಗೆ ಗೌರವ ಪೂರ್ವಕವಾಗಿ ಆಹ್ವಾನ ನೀಡಲಾಗಿದೆ.

ಕಾಸರಗೋಡು ಗೋ-ಕುಟೀರ ನಿರ್ಮಾಣಕ್ಕೆ ಸಹಕಾರ ನೀಡಿದ ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಗೋ- ಸೇವಾ ದಾನಿಗಳ ಹೆಸರಿನಲ್ಲಿ ಅವರ ಕುಟುಂಬದ ಒಳಿತಿಗಾಗಿ ಗೋವುಗಳಿಗೆ ಗೋ-ಗ್ರಾಸ ಗೋ- ಆಹಾರವನ್ನು ನೀಡಿ ಗೋ- ಸಂಕೀರ್ತನೆಯೊಂದಿಗೆ ಗೋ- ಆರತಿಯನ್ನು ಬೆಳಗಿಸಿ ಪ್ರಾರ್ಥನೆಯನ್ನು ಸಲ್ಲಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ.

ಗೋ - ಸೇವೆಯಲ್ಲಿ ಭಾಗವಹಿಸಲಿಚ್ಚಿಸುವ ದಾನಿಗಳು ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ),ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ,

ಕಾಸರಗೋಡು -671121(ಮೊಬೈಲ್-9448572016) ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries