ಕುಂಬಳೆ: ಅನಂತಪುರ ಕೈಗಾರಿಕಾ ಪ್ರಾಂಗಣದ ಪ್ಲೈವುಡ್ ಕಾರ್ಖಾನೆಗೆಬೆಂಕಿ ತಗುಲಿ ಸಂಪೂರ್ಣ ಹಾನಿಗೀಡಾಗಿದೆ. ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿರುವ ಮಾರ್ಕ್ ವುಡ್ ಪ್ಲೈವುಡ್ ಕಾರ್ಖಾನೆಯಲ್ಲಿ ಶುಕ್ರವಾರ ನಸುಕಿಗೆ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಪ್ರಮಾಣದ ಬೆಂಕಿ ನಂದಿಸಲು ಕಾಞಂಗಾಡು, ಕುತ್ತಿಕ್ಕೋಲ್, ಕಾಸರಗೋಡು, ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ವಾಹನಗಳು ತಾಸುಗಳ ಕಾಲ ನಡೆಸಿದ ಕಾರ್ಯಾಚರಣೆಯಿಂದ ಬೆಂಕಿ ಶಮನಗೊಳಿಸಲಾಗಿದೆ.
ಗುರುವಾರ ತಡರಾತ್ರಿ ವರೆಗೂ ಕಾರ್ಮಿಕರು ಕೆಲಸ ನಿರ್ವಹಿಸಿ, ಅಲ್ಲಿಂದ ತೆರಳಿದ್ದರು. ಪೇರಾಲ್ ಕಣ್ಣೂರು ನಿವಾಸಿ ಅಬ್ದುಲ್ ರಹಮಾನ್ ಎಂಬವರ ಮಾಲಿಕತ್ವದ ಕಾರ್ಖಾನೆ ಇದಾಗಿದೆ. ನಷ್ಟದ ಲೆಕ್ಕಾಚಾರ ಅಂದಾಜಿಸಲಾಗಿಲ್ಲ


