HEALTH TIPS

ಉಕ್ರೇನ್‌ ನಲ್ಲಿ ರಶ್ಯದಿಂದ ಭೀಕರ ಕ್ಷಿಪಣಿ ದಾಳಿ; 5 ಪ್ರಾಂತ್ಯಗಳನ್ನು ಗುರಿಯಿರಿಸಿ ಆಕ್ರಮಣ, ಹಲವು ಕಟ್ಟಡಗಳಿಗೆ ಹಾನಿ

ಕೀವ್: ರಶ್ಯ ಸೇನೆ ಸೋಮವಾರ ತಡರಾತ್ರಿಯಿಂದ ಉಕ್ರೇನ್ ವಿರುದ್ಧ 450 ದೀರ್ಘ ವ್ಯಾಪ್ತಿಯ ಡ್ರೋನ್‌ ಗಳು ಹಾಗೂ 79 ಕ್ಷಿಪಣಿಗಳಿಂದ ದಾಳಿ ನಡೆಸಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮಂಗಳವಾರ ತಿಳಿಸಿದ್ದಾರೆ.

ಉಭಯ ದೇಶಗಳ ನಡುವೆ ಕದನವನ್ನು ನಿಲ್ಲಿಸುವ ಪ್ರಯತ್ನವಾಗಿ ಯುಎಇನ ಅಬುಧಾಬಿಯಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ಆರಂಭಗೊಳ್ಳಲಿರುವ ಮುನ್ನಾ ದಿನ ಈ ದಾಳಿ ನಡೆದಿದೆ.

ಉಕ್ರೇನ್‌ ನ ಐದು ಪ್ರಾಂತಗಳನ್ನು ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಂಡು ರಶ್ಯವು ಈ ದಾಳಿಗಳನ್ನು ನಡೆಸಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ದಾಳಿಯಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

2022ರ ಫೆಬ್ರವರಿ 24ರಿಂದ ಉಕ್ರೇನ್ ಮೇಲೆ ರಶ್ಯವು ನಡೆಸುತ್ತಿರುವ ಪೂರ್ಣ ಪ್ರಮಾಣದ ಆಕ್ರಮಣವನ್ನು ಕೊನೆಗೊಳಿಸಲು ಆ ದೇಶದ ಮೇಲೆ ಹೆಚ್ಚು ಒತ್ತಡವನ್ನು ಹೇರುವಂತೆ ಹಾಗೂ ಅಧಿಕ ಪ್ರಮಾಣದಲ್ಲಿ ರಕ್ಷಣಾ ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಝೆಲೆನ್ಸ್ಕಿ ಅವರು ಮಿತ್ರ ರಾಷ್ಟ್ರಗಳನ್ನು ಆಗ್ರಹಿಸಿದರು.

ರಾಜಧಾನಿ ಕೀವ್‌ ನಲ್ಲಿ ರಶ್ಯವು ಕ್ಷಿಪಣಿ ಹಾಗೂ ಡ್ರೋನ್‌ ಗಳಿಂದ ನಡೆಸಿದ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ ಹಾಗೂ ಐದು ವಸತಿ ಕಟ್ಟಡಗಳು, ಶಿಶುವಿಹಾರ ಕೇಂದ್ರ ಹಾಗೂ ರಾಜಧಾನಿಯ ವಿವಿಧ ಭಾಗಗಳಲ್ಲಿರುವ ಗ್ಯಾಸ್‌ ಸ್ಟೇಷನ್‌ ಗಳು ಅಗ್ನಿಗಾಹುತಿಯಾಗಿವೆ.

ಆಗ್ನೇಯ ಪ್ರಾಂತವಾದ ಖಾರ್ಕಿವ್ ಹಾಗೂ ದಕ್ಷಿಣ ಒಡೆಸ್ಸಾ ಪ್ರಾಂತದ ಮೇಲೆ ರಶ್ಯ ದಾಳಿ ನಡೆಸಿದ್ದು ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries