HEALTH TIPS

ಭಾರತದ ಪೆಟ್ರೋಲಿಯಂ ತಂತ್ರ: 74 ದಿನಗಳಿಗೆ ಸಾಕಾಗುವಷ್ಟು ತೈಲ ದಾಸ್ತಾನು

ನವದೆಹಲಿ: ಭಾರತದ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ನೀತಿಯಂತೆ, ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಉಂಟಾದ ಸಂದರ್ಭಗಳನ್ನು ಎದುರಿಸುವ ಸಲುವಾಗಿ ದೇಶದಲ್ಲಿ 74 ದಿನಗಳಿಗೆ ಸಾಕಾಗುವಷ್ಟು ತೈಲ ದಾಸ್ತಾನು ಇದೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

"ನಮ್ಮಲ್ಲಿರುವ ತೈಲ ದಾಸ್ತಾನು, ಶುದ್ಧೀಕರಣ ಘಟಕಗಳಲ್ಲಿ ಸಂಗ್ರಹಿತ ಕಚ್ಚಾತೈಲ, ಹಡಗುಗಳಲ್ಲಿ ಸಾಗಣೆಯಲ್ಲಿರುವ ಕಚ್ಚಾತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಒಟ್ಟುಗೂಡಿಸಿದರೆ 74 ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹವಿದೆ" ಎಂದು ಪುರಿ ಸ್ಪಷ್ಟಪಡಿಸಿದರು.

ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ನೀತಿಯಂತೆ 90 ದಿನಗಳಿಗೆ ಸಾಕಾಗುವಷ್ಟು ತೈಲ ದಾಸ್ತಾನು ಇರಿಸಿಕೊಳ್ಳುವಂತೆ ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಶಿಫಾರಸು ಮಾಡಿದೆ ಎಂದು ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ತಿಳಿಸಿದರು.

ನಿಯತವಾಗಿ ಅಭಿವೃದ್ಧಿಯ ಪಥದಲ್ಲಿರುವ ಭಾರತದಂಥ ದೇಶದಲ್ಲಿ, ಅಂತರರಾಷ್ಟ್ರೀಯ ಅಶಾಂತಿಯ ಸಂದರ್ಭಗಳಲ್ಲಿ ಭದ್ರತೆಯ ದೃಷ್ಟಿಯಿಂದ ತೈಲ ದಾಸ್ತಾನು ಅಗತ್ಯವಿದೆ. "ಸಚಿವನಾಗಿ 74 ದಿನಗಳಿಗೆ ಸಾಕಾಗುವಷ್ಟು ದಾಸ್ತಾನು ನಮ್ಮಲ್ಲಿರುವುದು ಸುರಕ್ಷಿತವೆನ್ನುವುದು ನನ್ನ ಅಭಿಪ್ರಾಯ. ಇದನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು" ಎಂದು ಅವರು ಹೇಳಿದರು.

ಕಾರ್ಯತಂತ್ರದ ಪೆಟ್ರೋಲಿಯಂ ದಾಸ್ತಾನು ಘಟಕಗಳು ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿದ್ದು, ಒಡಿಶಾದಲ್ಲೂ ಶೀಘ್ರವೇ ಹೊಸ ಘಟಕ ಆರಂಭವಾಗಲಿದೆ. ಕಾರ್ಯತಂತ್ರದ ಪೆಟ್ರೋಲಿಯಂ ದಾಸ್ತಾನು ದೇಶದ ಆರ್ಥಿಕ ಸ್ಥಿರತೆ ಮತ್ತು ಇಂಧನ ಭದ್ರತೆಯ ಪ್ರಮುಖ ಅಂಶವಾಗಿದೆ ಎಂದು ಅವರು ವಿವರಿಸಿದರು.

ವಿಶ್ವದ ಅತಿದೊಡ್ಡ ಕಚ್ಚಾತೈಲ ಬಳಕೆದಾರ ದೇಶಗಳ ಪೈಕಿ ಭಾರತ ಒಂದು ಆಗಿದ್ದು, ಜಾಗತಿಕವಾಗಿ ನಾಲ್ಕನೇ ಅತಿಹೆಚ್ಚು ಶುದ್ಧೀಕರಣ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಭಾರತ ಐದನೇ ಅತಿದೊಡ್ಡ ಪೆಟ್ರೋಲಿಯಂ ಉತ್ಪನ್ನ ರಫ್ತು ದೇಶವಾಗಿಯೂ ಗುರುತಿಸಿಕೊಂಡಿದೆ ಎಂದು ಪುರಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries