HEALTH TIPS

ʼಪ್ರಧಾನಿ ಆಸನದ ಬಳಿ ವಿಪಕ್ಷ ಸಂಸದೆಯರುʼ: ಸಂಸತ್ ನಲ್ಲಿನ ಗದ್ದಲದ ವೀಡಿಯೊ ಹಂಚಿಕೊಂಡ ಸಚಿವ ಕಿರಣ್ ರಿಜಿಜು

ನವದೆಹಲಿ: ಫೆಬ್ರವರಿ 4ರಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವುದಕ್ಕೂ ಕೆಲವೇ ಕ್ಷಣಗಳ ಮುನ್ನ, ಕಾಂಗ್ರೆಸ್ ಪಕ್ಷದ ಸಂಸದೆಯರು ಪ್ರಧಾನಿಯವರ ಆಸನದ ಬಳಿ ಜಮಾಯಿಸಿರುವ ವೀಡಿಯೊವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಮಂಗಳವಾರ ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘೇರಾವ್‌ ಮಾಡಲು ವಿರೋಧ ಪಕ್ಷಗಳ ಸಂಸದರು ಯೋಜಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆ ನಾನು ಪ್ರಧಾನಿಗೆ ಲೋಕಸಭಾ ಕಲಾಪಕ್ಕೆ ಗೈರಾಗಿ ಎಂದು ಸಲಹೆ ನೀಡಿದ್ದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿಕೆ ನೀಡಿದ್ದರು.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಿರಣ್ ರಿಜಿಜು, "ಕಾಂಗ್ರೆಸ್ ಪಕ್ಷವು ತನ್ನ ಬಹುತೇಕ ಸದಸ್ಯರ ದುರ್ನಡತೆಯ ಬಗ್ಗೆ ಹೆಮ್ಮೆ ಹೊಂದಿದೆ!! ಒಂದು ವೇಳೆ ನಾವು ಬಿಜೆಪಿ ಸಂಸದರನ್ನು ತಡೆಯದೇ, ಕಾಂಗ್ರೆಸ್ ನ ಮಹಿಳಾ ಸಂಸದರನ್ನು ಎದುರುಗೊಳ್ಳಲು ಅವಕಾಶ ನೀಡಿದ್ದರೆ, ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು. ನಮಗೆ ಸಂಸತ್ತಿನ ಘನತೆ ಹಾಗೂ ಪಾವಿತ್ರ್ಯವನ್ನು ಕಾಪಾಡುವ ಬಗ್ಗೆ ಅತಿಯಾದ ಕಾಳಜಿಯಿದೆ" ಎಂದು ಬರೆದುಕೊಂಡಿದ್ದಾರೆ.

'ಏನು ಸರಿಯೆನಿಸುತ್ತದೊ ಅದನ್ನೇ ಮಾಡಿ" ಎಂಬ ಬ್ಯಾನರ್ ಹಿಡಿದುಕೊಂಡು, ಮಹಿಳಾ ಸಂಸದರು ಪ್ರಧಾನಿ ಆಸನದ ಬಳಿ ಜಮಾಯಿಸಿರುವುದನ್ನು ವೀಡಿಯೊದಲ್ಲಿದೆ.

Congress Party is proud of the most degrading behavior by their MPs !! If we had not stopped all BJP MPs and allowed the Women MPs to confront Cong. MPs, it would have led to very ugly scene. We have very high consideration, to protect the dignity & sanctity of the Parliament.
Congress
@INCIndia
महिला सांसदों ने गुब्बारे की हवा निकाल दी
Embedded video
4.2K
Reply
Copy link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries