HEALTH TIPS

ನಿವೃತ್ತಿ ನಂತರದ ಶೂನ್ಯ ತುಂಬಲು ಎಂಎ ಓದಿ ಚಿನ್ನದ ಪದಕ ಗೆದ್ದ 78ರ ಅಜ್ಜಿ

ಇಂದೋರ್: ದೇವಿ ಅಹಲ್ಯಾ ವಿಶ್ವವಿದ್ಯಾಲಯದ ಮರಾಠಿ ಎಂ.ಎ ಕೋರ್ಸ್‌ನಲ್ಲಿ 78 ವರ್ಷ ವಯಸ್ಸಿನ ಸುಷ್ಮಾ ಮೋಘೆ ಚಿನ್ನದ ಪದಕ ಗೆದ್ದಿದ್ದಾರೆ. ನಿವೃತ್ತಿಯ ನಂತರ ತಮ್ಮ ಶೈಕ್ಷಣಿಕ ಪ್ರಯಾಣವನ್ನು ಮುಂದುವರಿಸಿದ್ದ ಅವರು, ಈ ಮೂಲಕ ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ಸಾಧಿಸಿ ತೋರಿದ್ದಾರೆ.

ಸುಷ್ಮಾ ಅವರಿಗೆ ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯಿ ಪಟೇಲ್ ಅವರು, ಮಂಗಳವಾರ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕವನ್ನು ಪ್ರದಾನ ಮಾಡಿದರು.

'ಈ ವಯಸ್ಸಿನಲ್ಲೂ ಮರಾಠಿ ಎಂ.ಎ ಪಡೆಯಬಹುದು ಎಂದು ತಿಳಿದ ನಂತರ, ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡೆ. ಪದವಿ ಪಡೆಯುವುದಕ್ಕಿಂತ, ಪದವಿಗೆ ದಾಖಲಾಗುವ ವಿಚಾರವೆ ನನಗೆ ದೊಡ್ಡದಾಗಿತ್ತು. ಮಾತೃಭಾಷೆ ಮರಾಠಿ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾದ ವಿಷಯ' ಎಂದು ಸುಷ್ಮಾ ಹೇಳಿದರು.

ತನ್ನ ಶಿಕ್ಷಕರಿಗೆ ಕೃತಜ್ಞತೆ ವ್ಯಕ್ತಪಡಿಸಿದ ಅವರು, 'ನನ್ನ ಪ್ರಾಧ್ಯಾಪಕರು ನನ್ನನ್ನು ಸಂಪೂರ್ಣವಾಗಿ ಬೆಂಬಲಿಸಿ, ಆಫ್‌ಲೈನ್ ಮತ್ತು ಆನ್‌ಲೈನ್‌ ಎರಡರಲ್ಲೂ ಕಲಿಸಿದರು' ಎಂದರು.

ನಿವೃತ್ತಿಯ ನಂತರ ಶೂನ್ಯ ಆವರಿಸಿದ್ದ ಬದು‌ಕು, ಶೈಕ್ಷಣಿಕ ಕ್ಷೇತ್ರಕ್ಕೆ ಮರಳಿದ ನಂತರ ದಿಸೆಯನ್ನೆ ಬದಲಾಯಿಸಿದೆ ಎನ್ನುವ ಅವರು, ಪ್ರಸ್ತುತ ಪ್ರಸಿದ್ಧ ಹಿಂದಿ ಲೇಖಕರ ಕೃತಿಗಳನ್ನು ಮರಾಠಿಗೆ ಅನುವಾದ ಮಾಡುತ್ತಾ, ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries