HEALTH TIPS

ದೇಶದಲ್ಲಿ ನಕ್ಸಲ್ ಪ್ರಭಾವಿತ ಜಿಲ್ಲೆಗಳ ಸಂಖ್ಯೆ 7ಕ್ಕೆ ಇಳಿಕೆ: ಸರ್ಕಾರಿ ಸಮೀಕ್ಷೆ

ನವದೆಹಲಿ: ದೇಶದಲ್ಲಿ ನಕ್ಸಲ್ ಪ್ರಭಾವಿತ ಜಿಲ್ಲೆಗಳ ಸಂಖ್ಯೆ ಎಂಟರಿಂದ ಏಳಕ್ಕೆ ಇಳಿದಿದೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. ಈ ಬೆಳವಣಿಗೆಯು 2026ರ ಮಾರ್ಚ್ ವೇಳೆಗೆ ನಕ್ಸಲ್ ಹೋರಾಟವನ್ನು ಕೊನೆಗೊಳಿಸುವ ಕೇಂದ್ರ ಸರಕಾರದ ಘೋಷಣೆಗೆ ಪೂರಕವಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.

'ಎಡಪಂಥೀಯ ಉಗ್ರವಾದವನ್ನು ನಿಭಾಯಿಸುವ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ'ಯ ಸಮಗ್ರ ಮರುಪರಿಶೀಲನೆಯನ್ನು ಇತ್ತೀಚೆಗೆ ಕೇಂದ್ರ ಸರಕಾರ ಕೈಗೊಂಡಿತ್ತು. ಈ ಕಸರತ್ತಿನಲ್ಲಿ, ಜಾರ್ಖಂಡ್, ಬಿಹಾರ, ಆಂಧ್ರಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಒಂಭತ್ತು ರಾಜ್ಯಗಳ 38 ಜಿಲ್ಲೆಗಳಲ್ಲಿ ನಕ್ಸಲ್ ಪರಿಸ್ಥಿತಿಯನ್ನು ಅವಲೋಕಿಸಲಾಗಿತ್ತು.

ನಕ್ಸಲ್ ಹಿಂಸಾಚಾರ ಮತ್ತು ಚಟುವಟಿಕೆಗಳು ಈಗಲೂ ವರದಿಯಾಗುತ್ತಿರುವ ''ಎಡಪಂಥೀಯ ತೀವ್ರವಾದ ಪ್ರಭಾವಿತ ಜಿಲ್ಲೆಗಳ'' ಸಂಖ್ಯೆ ಈಗ ಎಂಟರಿಂದ ಏಳಕ್ಕೆ ಇಳಿದಿದೆ ಎಂದು ನೂತನ ಸಮೀಕ್ಷೆ ತಿಳಿಸಿದೆ. 2025 ಡಿಸೆಂಬರ್‌ನಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಈ ಸಂಖ್ಯೆ 8 ಆಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries