HEALTH TIPS

'ನವಿಟೇರ್' ವೈಫಲ್ಯ: ದೇಶದಾದ್ಯಂತ ವಿಮಾನ ಹಾರಾಟದಲ್ಲಿ ಅಲ್ಪ ವ್ಯತ್ಯಯ

ನವದೆಹಲಿ: ವಿಮಾನಗಳ ಟಿಕೆಟ್ ಕಾದಿರಿಸುವಿಕೆ ಮತ್ತು ಹಾರಾಟವನ್ನು ನಿಯಂತ್ರಿಸುವ ವ್ಯವಸ್ಥೆ 'ನವಿಟೇರ್'ನ ವೈಫಲ್ಯದಿಂದಾಗಿ ಗುರುವಾರ ಬೆಳಗ್ಗೆ ಭಾರತದಾದ್ಯಂತ ವಿಮಾನಗಳ ಹಾರಾಟ ಸ್ವಲ್ಪ ಸಮಯ ವ್ಯತ್ಯಯಗೊಂಡಿತು. ದೇಶದ ಹಾಗೂ ಏಶ್ಯಾ-ಪೆಸಿಫಿಕ್ ಮತ್ತು ಯುರೋಪ್ ವಲಯದ ಕೆಲವು ಭಾಗಗಳ ಹಲವು ವಿಮಾನಯಾನ ಸಂಸ್ಥೆಗಳ ಕಾರ್ಯನಿರ್ವಹಣೆ ವ್ಯತ್ಯಯಗೊಂಡಿತು.

ಭಾರತದಲ್ಲಿ, ಗುರುವಾರ ಬೆಳಗ್ಗೆ ಏರ್ ಇಂಡಿಯಾವನ್ನು ಹೊರತುಪಡಿಸಿ, ಈ ವ್ಯವಸ್ಥೆಯನ್ನು ಬಳಸುವ ಎಲ್ಲಾ ವಾಯಯಾನ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಕಾಣಿಸಿಕೊಂಡಿತು ಎಂದು ಮೂಲವೊಂದು ತಿಳಿಸಿದೆ.

''ನಿಯಂತ್ರಣ ವ್ಯವಸ್ಥೆಯ ವೈಫಲ್ಯವು ಬೆಳಗ್ಗೆ 6:45 ಮತ್ತು 7:28ರ ನಡುವೆ ಇಂಡಿಗೋ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಆಕಾಸ ಏರ್ ಮತ್ತು ಸ್ಪೈಸ್‌ಜೆಟ್ ಏರ್‌ಲೈನ್ಸ್‌ನ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಿತು. ಬಳಿಕ ಬೆಳಗ್ಗೆ 8:10ರಿಂದ 8:25ರ ನಡುವೆ ಈ ಸಮಸ್ಯೆಯು ಆಗಾಗ ಪುನರಾವರ್ತನೆಯಾಯಿತು. ಹಾಗಾಗಿ, ದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನಕ್ಕೆ ಹತ್ತುವ ಪ್ರಕ್ರಿಯೆ ತಾತ್ಕಾಲಿಕವಾಗಿ ವಿಳಂಬವಾಯಿತು ಎಂದು ವಿಮಾನ ನಿಲ್ದಾಣವೊಂದರ ಅಧಿಕಾರಿಯೊಬ್ಬರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries