ಶಿಯೋಪುರ್: ದಕ್ಷಿಣ ಆಫ್ರಿಕಾದಿಂದ 9 ಚೀತಾಗಳನ್ನು ಭಾರತಕ್ಕೆ ಶನಿವಾರ ಕರೆತರಲಾಗಿದ್ದು, ಈ ಮೂಲಕ ದೇಶದಲ್ಲಿರುವ ಚೀತಾಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಿಂದ ಚೀತಾಗಳನ್ನು ಭಾರತೀಯ ವಾಯುಪಡೆ ವಿಮಾನದಲ್ಲಿ ಗ್ವಾಲಿಯರ್‌ಗೆ ಕರೆತರಲಾಯಿತು.
ಗ್ವಾಲಿಯರ್‌ನಿಂದ ಐಎಎಫ್ ಹೆಲಿಕಾಪ್ಟರ್‌ಗಳ ಮೂಲಕ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ರಿಕಾದಿಂದ ಭಾರತಕ್ಕೆ ಕರೆತರಲಾದ ಚೀತಾಗಳ ಮೂರನೇ ಬ್ಯಾಚ್ ಇದಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರು ಚೀತಾಗಳನ್ನು ಉದ್ಯಾನಕ್ಕೆ ಬಿಡಲಿದ್ದಾರೆ.

