HEALTH TIPS

AI 'ಇಂಪ್ಯಾಕ್ಟ್': 1 ಸಾವಿರ ಉದ್ಯೋಗಿಗಳನ್ನು ಕೈಬಿಟ್ಟ ಬೆಂಗಳೂರಿನ ಸ್ಟಾರ್ಟ್‌ಅಪ್ ಕಂಪೆನಿ

ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ 'AI ಇಂಡಿಯಾ ಇಂಪ್ಯಾಕ್ಟ್' ಶೃಂಗಸಭೆಯ ಸಡಗರದ ನಡುವೆಯೇ ದೇಶದ ಉದ್ಯೋಗ ವಲಯದಲ್ಲಿ ಕೃತಕ ಬುದ್ಧಿಮತ್ತೆ ತಲ್ಲಣವನ್ನು ಸೃಷ್ಟಿಸತೊಡಗಿದೆ. ಬೆಂಗಳೂರು ಮೂಲದ ಗೃಹಾಲಂಕಾರ (ಹೋಮ್ ಡೆಕೋರ್) ಸ್ಟಾರ್ಟ್‌ಅಪ್ ಸಂಸ್ಥೆಯೊಂದು AI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ 1 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.

ಜಾಗತಿಕ ಹೂಡಿಕೆ ಸಂಸ್ಥೆಯಾದ ಕೆಕೆಆರ್ ಪ್ರಾಯೋಜಿತ ಸಂಸ್ಥೆಯಾದ ಲಿವ್ಸ್ಪೇಸ್ ತನ್ನ ಒಟ್ಟು ಉದ್ಯೋಗಿಗಳ ಪೈಕಿ ಶೇ.12ಕ್ಕಿಂತಲೂ ಅಧಿಕ ಮಂದಿಯನ್ನು ತೆಗೆದುಹಾಕಿದೆಯೆಂದು 'ಮನಿಕಂಟ್ರೋಲ್' ಸುದ್ದಿಸಂಸ್ಥೆ ವರದಿ ಮಾಡಿದೆ. ನಿರ್ವಹಣಾ ವೆಚ್ಚ ಕಡಿಮೆಗೊಳಿಸಲು ಹಾಗೂ AI ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಗಮನ ಕೇಂದ್ರೀಕರಿಸುವ ಪ್ರಯತ್ನವಾಗಿ ಲಿವ್ಸ್ಪೇಸ್ ಸಂಸ್ಥೆಯನ್ನು ಪುನರ್ರಚಿಸುತ್ತಿದೆ ಎಂದು ವರದಿ ತಿಳಿಸಿದೆ.

►ಸಹಸಂಸ್ಥಾಪಕನೂ ಔಟ್?

AI ಅಳವಡಿಕೆಯೊಂದಿಗೆ ಕಂಪೆನಿಯ ಪುನರ್ರಚನೆಯ ನಡುವೆ ಲಿವ್ಸ್ಪೇಸ್ನ ಸಹಸಂಸ್ಥಾಪಕರಾದ ಸೌರಬ್ ಜೈನ್ 11 ವರ್ಷಗಳ ಕಾರ್ಯನಿರ್ವಹಣೆಯ ಬಳಿಕ ಸಂಸ್ಥೆಯಿಂದ ಹೊರಬಂದಿದ್ದಾರೆ. 2015ರಲ್ಲಿ ತನ್ನ ಮಾಲಕತ್ವದ ಸ್ಟಾರ್ಟ್‌ಅಪ್ ಸಂಸ್ಥೆಯಾದ 'ಡಿಝೈನ್‌ಅಪ್' ಅನ್ನು ಲಿವ್ಸ್ಪೇಸ್ ಖರೀದಿಸಿದ ಬಳಿಕ ಜೈನ್ ಅವರು ಈ ಕಂಪೆನಿಗೆ ಸೇರ್ಪಡೆಗೊಂಡಿದ್ದರು ಮತ್ತು 2022ರಲ್ಲಿ ಅವರು ಮುಖ್ಯ ಉದ್ಯಮಾಧಿಕಾರಿಯಾಗಿ ಭಡ್ತಿಗೊಂಡಿದ್ದರು.

ಕಳೆದ ಕೆಲವು ತಿಂಗಳುಗಳಿಂದ ಕೃತಕ ಬುದ್ಧಿಮತ್ತೆ ಉದ್ಯೋಗ ಮಾರುಕಟ್ಟೆಯಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ಅಮೆಝಾನ್ ಹಾಗೂ ಮೈಕ್ರೋಸಾಫ್ಟ್ನಿಂದ ಹಿಡಿದು ಟಿಸಿಎಸ್ ಮತ್ತು ಆಯಕ್ಸೆಂಚುರ್ನಂತಹ ಬೃಹತ್ ಕಾರ್ಪೊರೇಟ್ ಕಂಪೆನಿಗಳು 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries