HEALTH TIPS

ಕೆಲವು ಕಂಪೆನಿಗಳು ಉದ್ಯೋಗಿಗಳನ್ನು ವಜಾಗೊಳಿಸಲು AI ಅನ್ನು ನೆಪವಾಗಿ ಬಳಸುತ್ತಿವೆ: OpenAI CEO

ನವದೆಹಲಿ: ಎಲ್ಲಾ ಉದ್ಯೋಗ ಕಡಿತಕ್ಕೆ AI ಕಾರಣವಲ್ಲ. ಕೆಲವು ಕಂಪೆನಿಗಳು ಉದ್ಯೋಗಿಗಳನ್ನು ವಜಾಗೊಳಿಸಲು AI ಅನ್ನು ನೆಪವಾಗಿ ಬಳಸುತ್ತಿವೆ ಎಂದು ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ.

AI ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ ಎಂಬುದು ಕಳೆದ ಕೆಲವು ತಿಂಗಳುಗಳಲ್ಲಿ ನಾವೆಲ್ಲರೂ ಕೇಳಿರುವ ವಿಷಯ.

ಗೂಗಲ್, ಅಮೆಝಾನ್ ಮತ್ತು ಟಿಸಿಎಸ್‌ನಂತಹ ಕಂಪೆನಿಗಳು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಇದಕ್ಕೆ ಹೆಚ್ಚು AI ಆಧಾರಿತ ಭವಿಷ್ಯದತ್ತ ಸಾಗುತ್ತಿರುವುದೇ ಕಾರಣವೆಂದು ತಿಳಿಸಿವೆ. ಆದರೆ, ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಪ್ರಕಾರ, ಎಲ್ಲಾ ಉದ್ಯೋಗ ಕಡಿತಕ್ಕೆ AI ಕಾರಣವಲ್ಲ ಎಂದು ತಿಳಿಸಿದೆ.

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯ ವೇಳೆ ಮಾತನಾಡಿದ ಸ್ಯಾಮ್ ಆಲ್ಟ್‌ಮನ್, ಕಂಪೆನಿಗಳು ಉದ್ಯೋಗಗಳನ್ನು ಕಡಿತಗೊಳಿಸಲು ಎಐಯನ್ನು ನೆಪವಾಗಿ ಬಳಸುತ್ತಿರುವ ಸಾಧ್ಯತೆ ಇದೆ. ಈ ವಿಧಾನವನ್ನು ಅವರು "AI ವಾಶಿಂಗ್" ಎಂದು ಕರೆದರು.

ನಿಖರ ಪ್ರಮಾಣ ಎಷ್ಟು ಎಂದು ನನಗೆ ತಿಳಿದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಕಂಪೆನಿಗಳು ಮೂಲತಃ ಮಾಡುವ ಉದ್ಯೋಗ ಕಡಿತಗಳಿಗೆ AIಯನ್ನು ಕಾರಣವೆಂದು ಹೇಳುವ 'AI ವಾಶಿಂಗ್' ನಡೆಯುತ್ತಿದೆ ಎಂದು CNBC TV18 ಜೊತೆ ಮಾತನಾಡುತ್ತಾ ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ.

ಉದ್ಯೋಗ ನಷ್ಟಕ್ಕೆ AI ಕಾರಣವೇ?

ಅನೇಕ ಕಂಪೆನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಕ್ಕೆ AI ಅನ್ನು ಕಾರಣವಾಗಿ ಬಳಸುತ್ತಿರಬಹುದು ಎಂದು ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ. ಆದರೆ ಆ ನಿರ್ಧಾರದ ಮೂಲ ಕಾರಣ ಅದು ಆಗಿರದೇ ಇರಬಹುದು. ಅನೇಕ ಉದ್ಯೋಗಗಳು ನೇರವಾಗಿ ಎಐ ಪರಿಣಾಮಕ್ಕೆ ಒಳಗಾಗುತ್ತಿರುವುದನ್ನೂ ಸ್ಯಾಮ್ ಒಪ್ಪಿಕೊಂಡರು.

ಇಂತಹ ಹೇಳಿಕೆ ನೀಡುತ್ತಿರುವವರು ಸ್ಯಾಮ್ ಆಲ್ಟ್‌ಮನ್ ಒಬ್ಬರೇ ಅಲ್ಲ. ಸಲಹಾ ಸಂಸ್ಥೆ Challenger, Gray & Christmas ವರದಿಯ ಪ್ರಕಾರ, 2025ರಲ್ಲಿ ಸರಿಸುಮಾರು 55,000 ಉದ್ಯೋಗ ಕಡಿತಗಳು ನೇರವಾಗಿ AI ಗೆ ಸಂಬಂಧಿಸಿದೆ. ಇದು ದೊಡ್ಡ ಸಂಖ್ಯೆಯಂತೆ ತೋರುತ್ತಿದ್ದರೂ, ಆ ವರ್ಷದ ಎಲ್ಲಾ ಉದ್ಯೋಗ ಕಡಿತಗಳಲ್ಲಿ ಇದು ಶೇಕಡಾ 1 ಕ್ಕಿಂತ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ಕಳೆದ ವರ್ಷದಲ್ಲಿ, ಐಟಿ ವಲಯದಲ್ಲೇ 1 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಮೆರಿಕದ ಲಾಭರಹಿತ ಸಂಸ್ಥೆಯಾದ ʼನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ʼ ವರದಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ AI ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದೆ. ಆದರೆ, ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ಕೆಲವು ಕಂಪೆನಿಗಳು ಸಿಬ್ಬಂದಿಗಳ ಸಂಖ್ಯೆ ಕಡಿತಕ್ಕೆ AI ಕೂಡ ಒಂದು ಕಾರಣವಾಗಿದೆ ಎಂದು ತಿಳಿಸಿದೆ.

AI ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?

AI ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆಯಾದರೂ, ಹೊಸ ಅವಕಾಶಗಳ ಸಾಧ್ಯತೆಯೂ ಇದೆ ಎಂದು ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ. ಪ್ರತಿ ತಂತ್ರಜ್ಞಾನ ಕ್ರಾಂತಿಯಂತೆ ನಾವು ಹೊಸ ರೀತಿಯ ಉದ್ಯೋಗಗಳನ್ನು ಕಂಡುಕೊಳ್ಳುತ್ತೇವೆ. ಆದರೆ ಮುಂದಿನ ಕೆಲವು ವರ್ಷಗಳಲ್ಲಿ AI ಯಿಂದ ಉಂಟಾಗುವ ನಿಜವಾದ ಪರಿಣಾಮವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries