HEALTH TIPS

Artificial intelligence ನೆರವಿನೊಂದಿಗೆ ಕರ್ನಾಟಕದಲ್ಲಿ ಕೃಷಿ: ₹214 ಕೋಟಿ ಹೂಡಿಕೆ

ನವದೆಹಲಿ: ದಶಕದ ಹಿಂದೆ ಬರಗಾಲದಿಂದ ತನ್ನ ಸಂಪೂರ್ಣ ಬೆಳೆಯನ್ನು ಕಳೆದುಕೊಂಡಿದ್ದ ಭಾರತೀಯ ಉದ್ಯಮಿಯೊಬ್ಬರು, ಕರ್ನಾಟಕ ರಾಜ್ಯದಲ್ಲಿ ಬೆಳೆಬಾಳುವ ಮಸಾಲೆಗಳು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಯಲು ಕೃತಕ ಬುದ್ಧಿಮತ್ತೆಯ (ಎಐ) ತಂತ್ರಜ್ಞಾನಗಳನ್ನು ಒಳಗೊಂಡ ಹೈಡ್ರೋಪೋನಿಕ್ ಕೃಷಿಯಲ್ಲಿ ₹214 ಕೋಟಿಗಳನ್ನು ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ.

ಮಂಗಳೂರು ಮೂಲದ ಪನಾಮ ಹೈಡ್ರೋ-ಎಕ್ಸ್‌ನ ಸ್ಥಾಪಕ ಮತ್ತು ಸಿಇಒ ವಿವೇಕ್ ರಾಜ್ ಈ ಸಾಹಸವನ್ನು ಮಾಡುತ್ತಿರುವ ಉದ್ಯಮಿ. ಅವರ ಕಂಪೆನಿಯು ಹಲವಾರು ವರ್ಷಗಳಿಂದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ₹146 ಕೋಟಿಗಳನ್ನು ಖರ್ಚು ಮಾಡಿದ್ದು, ಅದರೊಂದಿಗೆ ನಾಲ್ಕು ಪೇಟೆಂಟ್ ಪಡೆದ ಎಐ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ.

ಈ ತಂತ್ರಜ್ಞಾನದಲ್ಲಿ ಭೌತಿಕವಾಗಿ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಬೆಳೆಗಳ ರೋಗಗಳನ್ನು ಪತ್ತೆಹಚ್ಚುವ ಮತ್ತು ದ್ಯುತಿಸಂಶ್ಲೇಷಣೆಗಾಗಿ ಅತ್ಯುತ್ತಮವಾದ ಕೃತಕ ಬೆಳಕನ್ನು ಒದಗಿಸುವ ವ್ಯವಸ್ಥೆ ಇರಲಿವೆ ಎಂದು ಎಐ ಇಂಪ್ಯಾಕ್ಟ್‌ ಶೃಂಗಸಭೆ 2026ಕ್ಕೆ ಬಂದಿದ್ದ ವಿವೇಕ್ ಹೇಳಿದ್ದಾರೆ.

ಕಂಪೆನಿಯು ರಾಜ್ಯದ ಮೂಡಬಿದಿರೆಯಲ್ಲಿ 16 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, 2026ರ ಅಂತ್ಯದ ವೇಳೆಗೆ ಅಲ್ಲಿ ಹೈಡ್ರೋಪೋನಿಕ್ ಕೃಷಿಗೆ ಬೇಕಾದ ಮೂಲಸೌಕರ್ಯ ನಿರ್ಮಾಣವಾಗಲಿದೆ. 2027ರ ಜೂನ್‌ ವೇಳೆ ವಾಣಿಜ್ಯ ಕೊಯ್ಲನ್ನು ನಿರೀಕ್ಷಿಸಲಾಗಿದೆ.

- ವಿವೇಕ್ ರಾಜ್, ಪನಾಮ ಹೈಡ್ರೋ-ಎಕ್ಸ್‌ನ ಸ್ಥಾಪಕ ಮತ್ತು ಸಿಇಒಪ್ರಾಯೋಗಿಕ ಅವಧಿಯಲ್ಲಿ ನಮಗೆ ಉತ್ತಮ ಫಲಿತಾಂಶಗಳು ಸಿಕ್ಕಿವೆ. ನಮ್ಮ ಎಐ ತಂತ್ರಜ್ಞಾನಗಳಿಗೆ ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾದಿಂದ ಪೇಟೆಂಟ್‌ಗಳನ್ನು ಪಡೆದುಕೊಂಡಿದ್ದೇವೆ. ನಾವು ಇದನ್ನು ದೊಡ್ಡ ಪ್ರಮಾಣದಲ್ಲಿ ಅನುಷ್ಠಾನ ಮಾಡುತ್ತಿದ್ದೇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries