HEALTH TIPS

ಭಾರತದಲ್ಲಿ ವಯಸ್ಸಿನ ಆಧಾರದ ಮೇಲೆ 'ಸಾಮಾಜಿಕ ಜಾಲತಾಣ ನಿಷೇಧ' ಕುರಿತು ಚರ್ಚೆ- ಅಶ್ವಿನಿ ವೈಷ್ಣವ್

ನವದೆಹಲಿ: ಹದಿಹರೆಯದ 16 ವರ್ಷದೊಳಗಿನ ಮಕ್ಕಳಿಗೆ ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳು ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸಿರುವಂತೆಯೇ ಇದೀಗ ಭಾರತದಲ್ಲಿಯೂ ವಯಸ್ಸಿನ ಆಧಾರದ ಮೇಲೆ ನಿರ್ಬಂಧ ಹೇರಲು ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹೇಳಿದ್ದಾರೆ.

AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಮಾತನಾಡಿದ ಸಚಿವರು, ಡೀಪ್‌ಫೇಕ್‌ಗಳ ಬಗ್ಗೆ ಕಠಿಣವಾದ ನಿಯಮಗಳ ಅಗತ್ಯವಿದೆ ಎಂದು ಹೇಳಿದರು. ಈ ಮಧ್ಯೆ ಮುಂದಿನ ಎರಡು ವರ್ಷಗಳಲ್ಲಿ AI ಹೂಡಿಕೆಯಲ್ಲಿ 200 ಬಿಲಿಯನ್ ಡಾಲರ್ ಹೂಡಿಕೆಯ ನಿರೀಕ್ಷೆಯಿದೆ ಎಂದರು.

ಆಸ್ಟ್ರೇಲಿಯಾ ಡಿಸೆಂಬರ್ ನಿಂದ 16 ವರ್ಷದೊಳಗಿನವರಿಗೆ ಟಿಕ್ ಟಾಕ್, ಯು ಟ್ಯೂಬ್, ಸ್ನ್ಯಾಪ್‌ಚಾಟ್ ಮತ್ತಿತರ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಿದೆ. ಇಲ್ಲದಿದ್ದರೆ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ಈ ಮಧ್ಯೆ 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಸೂದೆಯನ್ನು ಫ್ರೆಂಚ್ ಜನಪ್ರತಿನಿಧಿಗಳು ಕಳೆದ ತಿಂಗಳು ಅಂಗೀಕರಿಸಿದರು. ಇದು ಸೆನೆಟ್ ಮತದಾನಕ್ಕಾಗಿ ಕಾಯುತ್ತಿದೆ.

AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಸುದ್ದಿಗಾರರಿಗೆ ಮಾತನಾಡಿದ ಅಶ್ವಿನ್ ವೈಷ್ಣವ್, ವಯಸ್ಸಿನ ಆಧಾರದ ಮೇಲೆ ಸಾಮಾಜಿಕ ಜಾಲತಾಣ ಬಳಕೆ ಮೇಲೆ ನಿಯಂತ್ರಣ ಇರಬೇಕೆಂದು ಅನೇಕ ದೇಶಗಳು ಈಗ ಒಪ್ಪಿಕೊಂಡಿರುವ ವಿಷಯವಾಗಿದೆ. ಇದೀಗ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ವಯಸ್ಸಿನ ಆಧಾರದ ಮೇಲೆ ನಿಷೇಧ, ಡೀಪ್ ಫೇಕ್ ಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಆಂಧ್ರಪ್ರದೇಶದ ಸಚಿವರೊಬ್ಬರು ಈ ಹಿಂದೆ ಸಾಮಾಜಿಕ ಮಾಧ್ಯಮವನ್ನು ಬಳಸುವ ಮಕ್ಕಳನ್ನು ನಿಷೇಧಿಸಲು ಕಾನೂನು ಜಾರಿಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ಆದರೆ ವೈಷ್ಣವ್ ಅವರ ಹೇಳಿಕೆ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ರಾಷ್ಟ್ರೀಯ ಕ್ರಮದ ಮೊದಲ ಸೂಚನೆಯಾಗಿದೆ.

ಕಳೆದ ವಾರ ಭಾರತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ನಿಯಂತ್ರಿಸುವ ನಿಯಮಗಳನ್ನು ಬಿಗಿಗೊಳಿಸಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು AI ವಿಷಯವನ್ನು ಸ್ಪಷ್ಟವಾಗಿ ಹೇಳಲು ಮತ್ತು ಮೂರು ಗಂಟೆಗಳ ಒಳಗೆ ಸಂಬಂಧಿಸಿದ ಅಧಿಕಾರಿಗಳಿಂದ ಮನವಿ ಪಡೆಯಬೇಕಾದ ಅಗತ್ಯವಿದೆ.

ಡೀಪ್‌ಫೇಕ್‌ಗಳ ನಿಯಂತ್ರಣಕ್ಕೆ ಕಠಿಣ ನಿಯಮದ ಅಗತ್ಯವಿದೆ."ಇದು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಮಸ್ಯೆಯಾಗಿದೆ. ಖಂಡಿತವಾಗಿಯೂ ನಮ್ಮ ಮಕ್ಕಳನ್ನು ರಕ್ಷಿಸುವ ಅವಶ್ಯಕತೆಯಿದೆ, ಈ ಹಾನಿಗಳಿಂದ ನಮ್ಮ ಸಮಾಜವನ್ನು ರಕ್ಷಿಸಬೇಕಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries