ನವದೆಹಲಿ: 'ಕೃತಕ ಬುದ್ಧಿಮತ್ತೆಗೆ (ಎಐ) ಸಂಬಂಧಿಸಿದ ಸರ್ಕಾರಿ ನಿಯಮ, ಕಾನೂನು ಮತ್ತು ನೀತಿಗಳನ್ನು ರೂಪಿಸುವಾಗ ಮಕ್ಕಳ ಹಕ್ಕುಗಳ ಮೇಲೆ ಅವು ಬೀರುವ ಪರಿಣಾಮಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು' ಎಂದು ಯುನಿಸೆಫ್‌ನ 'ಎಐ ಮತ್ತು ಮಕ್ಕಳ 3.0' ಮಾರ್ಗಸೂಚಿ ಹೇಳಿದೆ.
ಎಐ ಶೃಂಗಸಭೆಯಲ್ಲಿ ಎಫ್‌ಐಸಿಸಿಐ ಮತ್ತು ಯುನಿಸೆಫ್ ಆಯೋಜಿಸಿದ್ದ 'ಎಐ ಮತ್ತು ಮಕ್ಕಳು: ಸುರಕ್ಷಿತ, ಒಳಗೊಳ್ಳುವಿಕೆ ಮತ್ತು ಸಬಲೀಕರಣಕ್ಕಾಗಿ ಎಐ ತತ್ವಗಳ ಪಾಲನೆ' ಎಂಬ ಗೋಷ್ಠಿಯಲ್ಲಿ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಯಿತು.
'ಮಕ್ಕಳ ಮಾಹಿತಿ ಮತ್ತು ಅವರ ಗೋಪ್ಯತೆಯನ್ನು ರಕ್ಷಿಸುವುದು ಅತ್ಯಗತ್ಯ. ಎಐ ನೀತಿಗಳನ್ನು ರೂಪಿಸುವಾಗ ಮಕ್ಕಳ ವಿಷಯಗಳನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕು' ಎಂದು ಸಲಹೆ ನೀಡಿದೆ.

