ಈ ಎರಡು ಕಂಪನಿಗಳ ಮೇಲೆ ಅ.22ರಂದು ದಿಗ್ಬಂಧನ ಹೇರಿದ ಅಮೆರಿಕ, ಈ ಎರಡು ಕಂಪನಿಗಳ ಜತೆಗಿನ ವಹಿವಾಟನ್ನು ಕಡಿತಗೊಳಿಸಲು ನ.21ರ ಗಡುವು ನೀಡಿತ್ತು.
ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹಂಚಿಕೊಂಡ ಅಂಕಿ ಅಂಶಗಳ ಪ್ರಕಾರ, ಭಾರತ ಆಮದು ಮಾಡಿಕೊಂಡಿರುವ ಕಚ್ಚಾ ತೈಲದ ಪ್ರಮಾಣ ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ.27ರಷ್ಟು ಕಡಿತಗೊಂಡಿದೆ. 2025ರ ನವೆಂಬರ್ ನಲ್ಲಿ 370 ಕೋಟಿ ಡಾಲರ್ ಮೌಲ್ಯದ ತೈಲ ಆಮದು ಮಾಡಿಕೊಳ್ಳಲಾಗಿತ್ತು. ಜತೆಗೆ 2024ರ ಡಿಸೆಂಬರ್ ನಲ್ಲಿ ಆಮದು ಮಾಡಿಕೊಂಡ 320 ಕೋಟಿ ಡಾಲರ್ ಮೌಲ್ಯದ ಪ್ರಮಾಣಕ್ಕೆ ಹೋಲಿಸಿದರೆ ಶೇ.15ರಷ್ಟು ಕಡಿಮೆ.
ರಷ್ಯಾದಿಂದ ಆಮದು ಮಾಡಿಕೊಂಡ ತೈಲ ಪ್ರಮಾಣದ ಬಗ್ಗೆ ಮಾಹಿತಿ ನೀಡುವಂತೆ ಭಾರತದ ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ಗೆ ಮಾಡಿದ ಇ-ಮೇಲ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಆದಾಗ್ಯೂ 2025-26ರಲ್ಲಿ ಭಾರತಕ್ಕೆ ಅತಿಹೆಚ್ಚು ಕಚ್ಚಾ ತೈಲ ರಫ್ತು ಮಾಡಿದ ದೇಶವಾಗಿದೆ. ಭಾರತ ಡಿಸೆಂಬರ್ ನಲ್ಲಿ ಆಮದು ಮಾಡಿಕೊಂಡ 11.4 ಶತಕೋಟಿ ರೂಪಾಯಿ ಮೌಲ್ಯದ ತೈಲದಲ್ಲಿ ಶೇ.24ರಷ್ಟು ಪಾಲನ್ನು ರಷ್ಯಾ ಹೊಂದಿದೆ. ಉಳಿದಂತೆ ಇರಾಕ್ (240 ಕೋಟಿ ಡಾಲರ್), ಸೌದಿ ಅರೇಬಿಯಾ (180 ಕೋಟಿ ಡಾಲರ್), ಯುಎಇ (170 ಕೋಟಿ ಡಾಲರ್) ಮತ್ತು ಅಮೆರಿಕ (60 ಲಕ್ಷ ಡಾಲರ್) ಭಾರತಕ್ಕೆ ತೈಲ ರಫ್ತು ಮಾಡಿರುವ ಪ್ರಮುಖ ದೇಶಗಳು.
2026ನೇ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಭಾರತ 105.1 ಶತಕೋಟಿ ಮೌಲ್ಯದ ಕಚ್ಚಾತೈಲವನ್ನು 34 ಕಡೆಗಳಿಂದ ಆಮದು ಮಾಡಿಕೊಂಡಿದ್ದು, 33.1 ಶತಕೋಟಿ ಡಾಲರ್ ಮೌಲ್ಯದ ತೈಲ ರಫ್ತು ಮಾಡಿದ ರಷ್ಯಾ ಮೊದಲ ಸ್ಥಾನದಲ್ಲಿದೆ. ಇದು ಭಾರತದ ಒಟ್ಟು ತೈಲ ಆಮದಿನ ಶೇ.31.5ರಷ್ಟಾಗಿದೆ.

