ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ತೂರಿನಲ್ಲಿ ಸ್ವಂತ ಪುತ್ರಿಯನ್ನು ದುರುಳ ತಂದೆ ಇರಿದು ಕೊಲೆಗೈದಿದ್ದಾನೆ. ಕುಂಜತ್ತೂರು ಹಿಲ್‍ಟಾಪ್ ನಿವಾಸಿ, ಉಮ್ಮರ್ ಪುತ್ರಿ ಜುಮೈಲಾ(18)ಮೃತಪಟ್ಟ ಯುವತಿ.
ಆರೋಪಿ ಉಮ್ಮರ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಸಂಜೆ ಘಟನೆ ನಡೆದಿದ್ದು, ಉಮ್ಮರ್, ಜುಮೈಲಾಳನ್ನು ಇರಿದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಈಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕುಟುಂಬ ಕಲಹ ಕೊಲೆಯಲ್ಲಿ ಕೊನೆಗೊಂಡಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಉಮ್ಮರ್, ಮೂರು ತಿಂಗಳ ಹಿಂದೆಯಷ್ಟೆ ಊರಿಗೆ ಆಗಮಿಸಿದ್ದನು.


