ಕುಂಬಳೆ: ದುರಸ್ತಿಗಾಗಿ ವರ್ಕ್‍ಶಾಪ್‍ಗಳಲ್ಲಿ ನಿಲುಗಡೆಗೊಳಿಸಿದ್ದ ಲಾರಿಗಳಿಂದ ಬ್ಯಾಟರಿ, ಬಸ್‍ನ ಟ್ಯಾಂಕ್‍ನಿಂದ ಡೀಸೆಲ್ ಕಳವುಗೈದಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಪೆರ್ವಾಡಿನ ವರ್ಕ್ ಶಾಪ್ ಒಂದರಲ್ಲಿ ಘಟನೆ ನಡೆದಿದೆ. ಆಟೋವರ್ಕ್ ಶಾಪಿನ ಹಿಂಭಾಗದಲ್ಲಿ ಲಾರಿ ಮತ್ತು ಬಸ್‍ಗಳನ್ನು ನಿಲ್ಲಿಸಲಾಗಿದ್ದು, ಲಾರಿಗಳ ಬ್ಯಾಟರಿ ಹಾಗೂ ಖಾಸಗಿ ಬಸ್ಸಿನ ಟ್ಯಾಂಕಿನಿಂದ ಡೀಸೆಲ್ ಕಳವುಗೈದಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ವರ್ಕ್‍ಶಾಪ್ ಮಾಲಿಕನ ದೂರುನನ್ವಯ ಪೊಲೀಸರು ಕೇಸು ದಕಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


