ಕಾಸರಗೋಡು: ಕಾಞಂಗಾಡು ಕುಶಾಲನಗರದಲ್ಲಿ ಪ್ರಯಾಣಿಕರ ತಂಗುದಾಣ ಕಿಚ್ಚಿರಿಸಿ ನಾಶಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಠಾಣೆ ಪೊಲೀಸರು ಎರಡು ಪ್ರತ್ಯೇಕ ಕೇಸು ದಾಖಲಿಸಿಕೊಂಡಿದ್ದಾರೆ.
ಸಿಪಿಎಂ ಮುಖಂಡ, ನಗರಸಭಾ ಸದಸ್ಯ ಕುಶಾಲನಗರ ನಿವಾಸಿ ಸಂತೋಷ್ ಅವರ ದೂರಿನನ್ವಯ ಆವಿಯ ನಿವಾಸಿ ಶಂಸುದ್ದೀನ್ ಸೇರಿದಂತೆ 20ಮಂದಿ ಮುಸ್ಲಿಂ ಯೂತ್‍ಲೀಗ್ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗಿದೆ. ಶಂಸುದ್ದೀನ್ ನೇತೃತ್ವದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಿ, ನಂತರ ಅವರೇ ಗಲಭೆಗೆ ಮುಂದಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಎಂ.ಶಂಸುದ್ದೀನ್ ಅವರು ನೀಡಿದ ಪ್ರತಿ ದೂರಿನನ್ವಯ ಆವಿಯಲ್ಲಿ ಮುಸ್ಲಿಂ ಲೀಗ್ ವತಿಯಿಂದ ನಿರ್ಮಿಸಿದ ಪ್ರಯಾಣಿಕರ ತಂಗುದಾಣಕ್ಕೆ ಬೆಂಕಿಹಚ್ಚಿ ನಾಶಗೊಳಿಸುವ ಮೂಲಕ ಗಲಭೆಗೆ ಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

