ಕಾಸರಗೋಡು: ಕೇಂದ್ರ ಹಣಕಾಸು ಸಚಿವೆ ಲೋಕಸಭೆಯಲ್ಲಿ ಮಂಡಿಸಿದ ಬಜೆಟ್‍ನಲ್ಲಿ ಕೇರಳವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ.ಕೇರಳ ಭಾರತದ ಭೂಪಟದಲ್ಲಿಲ್ಲವೇ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಪ್ರಶ್ನಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಕಾಸರಗೋಡು ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಕೇಂದ್ರ ಬಜೆಟ್ ತಯಾರಿಸುವ ಮೊದಲು ರಾಜ್ಯ ಸರ್ಕಾರ ಕೇಂದ್ರದೊಡನೆ 29 ಬೇಡಿಕೆಗಳನ್ನು ಮುಂದಿರಿಸಿತ್ತು. ಅದರಲ್ಲಿ ಯಾವುದನ್ನೂ ಬಜೆಟ್‍ನಲ್ಲಿ ಅಂಗೀಕರಿಸಲಾಗಿಲ್ಲ. ಆದ್ದರಿಂದ ಬಜೆಟ್‍ನಲ್ಲಿ ಕೇರಳವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ. ಇದು ಪ್ರತಿಭಟನಾರ್ಹವೆಂದು ಅವರು ಹೇಳಿದ್ದಾರೆ.



