ಕಾಸರಗೋಡು: ಕೇವಲ ನಾಲ್ಕು ತಿಂಗಳ ಹರೆಯದ ಎಳೆ ಶಿಶುವಿನ ಗಂಟಲಲ್ಲಿ ತಾಯಿಯ ಎದೆ ಹಾಲು ಸಿಲುಕಿ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಜಿಲ್ಲೆಯ ಬೇಕಲ ಹದ್ದಾದ್ ನಗರ ರಸೀನಾ ಮಂಜಿಲ್ ನಿವಾಸಿ ಕೆ. ಮುಹ್ಮದ್ ಹನೀಫ ಅವರ ಪುತ್ರ ಲಿದಾನ್ ಫಾರ್ಮಿ ಮೃತಪಟ್ಟ ಮಗು. ಭಾನುವಾರ ರಾತ್ರಿ ಮಗುವಿಗೆ ಎದೆಹಾಲು ನೀಡಿ, ಮಲಗಿಸಿದ್ದು, ತಡರಾತ್ರಿ ಮಗುವಿನ ಶರೀರದಲ್ಲಿ ಯಾವುದೇ ಚಲನೆಯಿಲ್ಲದಿರುವುದನ್ನು ಗಮನಿಸಿದ ತಾಯಿ, ಮನೆಯವರಿಗೆ ಮಾಹಿತಿ ನೀಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಎದೆಹಾಲು ನೀಡಿದ ತಕ್ಷಣ ಮಗುವನ್ನು ಮಲಗಿಸಿರುವುದರಿಂದ ಹಾಲು ಕೆಳಗಿಳಿಯದೆ, ಉಸಿರಾಟದ ಸಮಸ್ಯೆ ಉಂಟಾಗಿರಬೇಕೆಂದು ಸಂಶಯಿಸಲಾಗಿದೆ. ಬೇಕಲ ಪೆÇಲೀಸರು ಅಸಹಜ ಸಾವಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.


