HEALTH TIPS

ಜಿಲ್ಲೆಯ ವಿವಿಧೆಡೆ ಪೊಲೀಸ್, ಅಬಕಾರಿ ಕಾರ್ಯಾಚರಣೆ-ಮೂವರ ಬಂಧನ, ಮಾದಕ ವಸ್ತು ವಶ

ಕಾಸರಗೋಡು: ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಅಬಕಾರಿ ಮತ್ತು ಪೊಲೀಸ್ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಮಾದಕ ದ್ರವ್ಯ ವಶಪೊಡಿಸಿಕೊಂಡು ಮೂವರನ್ನು ಬಂಧಿಸಲಾಗಿದೆ. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶದನ್ವಯ ಮಾದಕ ದ್ರವ್ಯ ಪತ್ತೆ ವಿಶೇಷ ದಳ ಮತ್ತು ಕುಂಬಳೆ ಪೊಲೀಸರು ಮಂಗಲ್ಪಾಡಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದ 54ಗ್ರಾಂ ಗಾಂಜಾ ವಶಪಡಿಸಿಕೊಂಡು, ಮಂಗಲ್ಪಾಡಿ ಅಂಬಾರ್ ಪಳ್ಳ ನಿವಾಸಿ ಇದ್ದೀನ್‍ಕುಞÂ ಯಾನೆ ಇರ್ಷಾದ್ ಎಂಬಾತನನ್ನು ಬಂಧಿಸಿದ್ದಾರೆ.ಕಾಸರಗೋಡು ಎಎಸ್‍ಪಿ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. 

ಬೇಕಲಡಿವೈಎಸ್‍ಪಿ ವಿ.ವಿ ಮನೋಜ್ ನೇತೃತ್ವದ ಪೊಲೀಸರ ತಂಡ ಕೋಟಿಕುಳಂ ರೈಲ್ವೆ ಪ್ಲ್ಯಟ್ ಫಾರ್ಮ್‍ನಲ್ಲಿನಡೆಸಿದ ಕಾರ್ಯಾಚರಣೆಯಲ್ಲಿ 1.849 ಕಿ.ಗ್ರಾಂ ಗಾಂಜಾ ವಶಪಡಿಸಿಕೊಂಡು ಕುಣಿಯ ನಿವಾಸಿ ಹಬೀಬ್‍ರಹಮಾನ್ ಎಂಬಾತನನ್ನು ಬಂಧಿಸಿದ್ದಾರೆ. ಕಾಸರಗೋಡು ಅಬಕಾರಿ ದಳ ಸಿಬ್ಬಂದಿ ಮಧೂರು ಎಸ್.ಪಿ ನಗರದಲ್ಲಿ ನಡೆಸಿದಕಾರ್ಯಾಚರಣೆಯಲ್ಲಿ 13.22ಗ್ರಾಂ ಎಂಡಿಎಂಎ ಮತ್ತು 11.22ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು,ತಳಂಗರೆ ಕೋಳಿಯಾಡ್ ನಿವಾಸಿ ನೌಶಾದ್ ಪಿ.ಎನ್ ಎಂಬಾತನನ್ನು ಬಂಧಿಸಿ,ಈತನ ವಿರುದ್ಧ ಎನ್‍ಡಿಪಿಎಸ್ ಅನ್ವಯ ಕೇಸು ದಾಖಲಿಸಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries