HEALTH TIPS

ಟಿಕೆಟ್‌ ಹಣ ವಾಪಾಸ್ ಮಾಡಿ, ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಂಡ 'ಕೇರಳ ಸ್ಟೋರಿ'

 ಕೊಚ್ಚಿ: 'ದಿ ಕೇರಳ ಸ್ಟೋರಿ 2' ಸಿನಿಮಾ ಬಿಡುಗಡೆಯಾಗಿಲ್ಲ. ಬುಕ್ಕಿಂಗ್‌ ಆಗಿದ್ದ ಟಿಕೆಟ್ ಹಣವನ್ನು ಕೂಡ ವಾಪಾಸ್ ಮಾಡಲಾಗಿದೆ ಎಂದು ಸಿನಿಮಾ ಬಿಡುಗಡೆಯನ್ನು ವಿರೋಧಿಸಿದ್ದ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಚಿತ್ರವು ಕೋಮು ಸಾಮರಸ್ಯವನ್ನು ಹಾಳುಮಾಡುವ, ಅಶಾಂತಿ ಸೃಷ್ಟಿಸುವ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕದಡುವ, ಸಾಮಾಜಿಕ ಸಾಮರಸ್ಯ ಹಾಳುಮಾಡುವ ಪ್ರವೃತ್ತಿಯನ್ನು ಹೊಂದಿರುವ ಕಾರಣ ಚಿತ್ರದ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಶ್ರೀದೇವ್‌ ನಂಬೂದರಿ ಎನ್ನುವವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 

ಸಿನಿಮಾ ಬಿಡುಗಡೆಗೆ ಕೇರಳ ಹೈಕೋರ್ಟ್‌ ಗುರುವಾರ ಮಧ್ಯಂತರ ತಡೆ ನೀಡಿತ್ತು. 


ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸಿನಿಮಾದ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಆರೋಪಿಸಿ ಅರ್ಜಿದಾರರ ಪರ ವಕೀಲೆ ಮೈತ್ರೇಯಿ ಸಚ್ಚಿದಾನಂದ ಹೆಗ್ಡೆ ಅವರು ಚಿತ್ರದ ನಿರ್ಮಾಪಕರ ವಿರುದ್ಧ ನ್ಯಾಯಂಗ ನಿಂದನೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಶುಕ್ರವಾರ ಬೆಳಗ್ಗೆ ಮುಂದಾಗಿದ್ದರು. ಈ ಕುರಿತು ಪರಿಶೀಲಿಸಿ ನಡೆಸಲು ಸಮಯ ಕೋರಿದ್ದರು.

ಶುಕ್ರವಾರ ಮಧ್ಯಾಹ್ನ ಪತ್ರಕರ್ತರೊಂದಿಗೆ ಮಾತನಾಡಿರುವ ವಕೀಲೆ, 'ಸದ್ಯಕ್ಕೆ ಸಿನಿಮಾ ಬಿಡುಗಡೆಯಾಗಿಲ್ಲ. ಟಿಕೆಟ್ ಹಣವನ್ನು ಕೂಡ ವಾಪಾಸ್ ನೀಡಿರುವುದರಿಂದ ನಾವು ನ್ಯಾಯಂಗ ನಿಂದನೆ ಅಡಿಯಲ್ಲಿ ಪ್ರಕರಣ ದಾಖಲಿಸುವುದಿಲ್ಲ' ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಬೇಚು ಕುರಿಯನ್‌ ಥಾಮಸ್‌ ಅವರಿದ್ದ ಏಕಪೀಠವು, ಸಿನಿಮಾ ಬಿಡುಗಡೆಗೆ 15 ದಿನ ತಡೆ ನೀಡಿತ್ತು.

ಸಿನಿಮಾದ ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರು ಗುರುವಾರ ತಡರಾತ್ರಿ ಡಿವಿಜನ್ ಬೆಂಚ್‌ ಎದುರು ಮನವಿ ಮಾಡಿದ್ದರು. ನ್ಯಾ. ಸುಶ್ರುತ್ ಅರವಿಂದ ಧರ್ಮಾಧಿಕಾರಿ ಮತ್ತು ಪಿ.ವಿ ಬಾಲಕೃಷ್ಣನ್ ಅವರಿದ್ದ ಪೀಠವು ಆದೇಶವನ್ನು ಕಾಯ್ದಿರಿಸಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries