HEALTH TIPS

ಇಲಿವಿಷ ಬಿದ್ದಿದ್ದ ಲೋಟದಲ್ಲಿ ನೀರು ಸಏವಿಸಿದ ಗೃಹಿಣಿ ಮೃತ್ಯು

ಕಾಸರಗೋಡು: ಇಲಿ ವಿಷ ಬಿದ್ದಿದ್ದ ಅದೇ ಲೋಟದಲ್ಲಿ ನೀರು ಸೇವಿಸಿದ ಮಹಿಳೆ ಮೃತಪಟ್ಟ ಘಟನೆ ರಾಜಾಪುರಂನಲ್ಲಿ ನಡೆದಿದೆ. ರಾಜಾಪುರಂಪೊಲೀಸ್ ಠಾಣೆ ವ್ಯಾಪ್ತಿಯ ಕೋಳಿಚಚ್ಚಾಲ್ ಮೊಟ್ಟಂಕೊಚ್ಚಿ ನಿವಾಸಿ ಬಿ.ಪಿ ಶೋಭನಾ(53)ಮೃತಪಟ್ಟ ಮಹಿಳೆ. 28ರಂದು ರಾತ್ರಿ,  ಮನೆಯೊಳಗೆ  ಇಲಿಯನ್ನು ಕೊಲ್ಲುವ ನಿಟ್ಟಿನಲ್ಲಿ ವಿಷ ಇರಿಸುವ ಸಂದರ್ಭ ಅಚಾತುರ್ಯದಿಂದ ಗ್ಲಾಸಿಗೆ ವಿಷ ಬಿದ್ದಿದ್ದು, ಇದು ಅರಿವಿಗೆ ಬಾರದೆ, ಅದೇ ಗ್ಲಾಸಲ್ಲಿ ಶೋಭನಾ ನೀರು ಸೇವಿಸಿದ್ದರು. ಇದರಿಂದ ಅಬೋಧಾವಸ್ಥೆಗೆ ಜಾರಿದ್ದ ಇವರನ್ನು  ಗಂಭೀರಾವಸ್ಥೆಯಲ್ಲಿ ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಾಜಾಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries