ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಮಣ್ಣಂಗುಳಿ ಮೈದಾನ ಸನಿಹದ ಅಂಗನವಾಡಿ ಕಟ್ಟಡಕ್ಕೆ ನುಗ್ಗಿದ ಕಳ್ಳರು ಮಕ್ಕಳಿಗೆ ಅಡುಗೆ ತಯಾರಿಸುವ ಮಿಕ್ಸಿ, ಎರಡು ಕುಕ್ಕರ್, ಒಂದು ಸೌಂಡ್‍ಬಾಕ್ಸ್ ಹಾಗೂ ಇತರ ಪಾತ್ರೆ ಸಾಂಗ್ರಿ ಕಳವುಗೈದಿದ್ದಾರೆ. ಅಂಗನವಾಡಿ ಕಟ್ಟಡದ ಕಬ್ಬಿಣದ ಗ್ರಿಲ್ಸ್‍ನ ಬೀಗ ಒಡೆದು ನುಗ್ಗಿ ಕೃತ್ಯವೆಸಗಲಾಗಿದೆ. ಐಸಿಡಿಎಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಮಂಜೇಶ್ವರ ಠಾಣೆ ಪೊಲೀಸರಿಗೆ ನೀಡಿದ ದೂರಿನನ್ವಯ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದರು. ಆಸುಪಾಸಿನ ಸಿಸಿ ಟಿವಿ ದೃಶ್ಯಾವಳಿಯನ್ನೂ ಪೊಲಿಸರು ತಪಾಸಣೆ ನಡೆಸಿದ್ದಾರೆ.

