HEALTH TIPS

ಆನೆಕಲ್ಲು ಶಾಲಾ ವಾರ್ಷಿಕೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ: ಆನೆಕಲ್ಲು ಎ.ಯು. ಪಿ. ಶಾಲೆಯ ವಾರ್ಷಿಕೋತ್ಸವ ಹಾಗೂ ಶಾಲಾ ಮುಖ್ಯ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ ಫೆ. 17 ಮಂಗಳವಾರ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ಶಾಲೆಯಲ್ಲಿ ಜರಗಿತು. ನಿವೃತ್ತ ಮುಖ್ಯೋಪಾಧ್ಯಾಯ ಅಹಮ್ಮದ್ ಮಾಸ್ತರ್ ಆನೆಕಲ್ಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಶಾಲಾ ವಾರ್ಷಿಕೋತ್ಸವದ ಮೂಲಕ ಮಕ್ಕಳ ಸೃಜನಾತ್ಮಕ ಚಟುವಟಿಕೆಗೆ ವೇದಿಕೆಯನ್ನು ಒದಗಿಸುವಂತಾಗುತ್ತದೆ. ಜೊತೆಗೆ ರಕ್ಷಕರ, ಹಳೆವಿಧ್ಯಾರ್ಥಿಗಳಿಗೆ  ಶಾಲೆಯ ಮೇಲೆ ಒಳ್ಳೆಯ ಬಾಂಧವ್ಯವನ್ನು ಉಂಟುಮಾಡುತ್ತದೆ ಎಂದು ತಿಳಿಸಿದರು. 

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರಶಾಂತ್ ಬಗಂಬಿಲ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಾಜಿ ಪಿಟಿಎ ಅಧ್ಯಕ್ಷ ಉಮರಬ್ಬ ಆನೆಕಲ್ಲು, ಅಶ್ರಫ್ ಆನೆಕಲ್ಲು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನ್ವರ್ ಆನೆಕಲ್ಲು, ಸತ್ಯ ಪ್ರಕಾಶ್ ಆನೆಕಲ್ಲು, ಉಪಾಧ್ಯಕ್ಷ ಅಶೋಕ್ ಕೊಡ್ಲಮೊಗರು, ಮುರಳಿ ಶ್ಯಾಂ ಮಾಸ್ತರ್, ಅಬ್ದುಲ್ ಖಾದರ್, ಎಂಪಿ.ಟಿ.ಎ.ಅಧ್ಯಕ್ಷೆ ಶೋಭಾ ಕತ್ತೆರಿಕೋಡಿ, ಉಪಾಧ್ಯಕ್ಷೆ ಭವ್ಯಶ್ರೀ, ಪಿ.ಟಿ.ಎ. ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ರವಿಶಂಕರ್ ಸ್ವಾಗತಿಸಿ, ಸಂತೋಷ್ ಮಾಸ್ತರ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries