HEALTH TIPS

ನ್ಯಾಯಮೂರ್ತಿ ಆರ್.ಎನ್ ಪ್ರಸಾದ್ ಆಯೋಗದ ವರದಿ ತಕ್ಷಣ ಜಾರಿಗೊಳಿಸಬೇಕು-ಓಬಿಸಿ ಮೋರ್ಚ ಒತ್ತಾಯ

ಕಾಸರಗೋಡು: ಸಾಂಪ್ರದಾಯಿಕ ಕೆಲಸಗಳನ್ನು ನಿರ್ವಹಿಸುವ ಸಮುದಾಯಗಳನ್ನು ಕೆನೆಪದರದಿಂದ(ಕ್ರೀಮಿಲೇಯರ್ )ಹೊರತುಪಡಿಸಬೇಕೆಂಬ ನ್ಯಾಯಮೂರ್ತಿ ಆರ್. ಎನ್. ಪ್ರಸಾದ್ ಆಯೋಗದ ವರದಿಯನ್ನು ಜಾರಿಗೆ ತರಲು ಸರ್ಕಾರ ಸಿದ್ಧವಾಗಬೇಕು ಎಂದು ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಶೈಬು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅವರು ಒಬಿಸಿ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿವತಿಯಿಂದ ಕಾಸರಗೋಡು ನಗರದ ಎಂ.ಜಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಚೇರಿ ಎದುರು ಆಯೋಜಿಸಲಾದ ಧರಣಿ ಸತ್ಯಾಗ್ರಹದಲ್ಲಿ ಮುಖ್ಯ ಭಾಷಣ ಮಾಡಿದರು. 

ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಉಪಾಧ್ಯಕ್ಷ ಮುರಳೀಧರ್ ಯಾದವ್ ಧರಣಿ ಉದ್ಘಾಟಿಸಿದರು. ಒಬಿಸಿ ಮೋರ್ಚಾ ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ.ಪಿ. ವಲ್ಸರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುರಾಜ್ ಪರವನಡ್ಕ,  ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಒಬಿಸಿ ಮೋರ್ಚಾ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಮುರಳೀಕುಮಾರ್ ಮಧೂರು, ಕುಞÂಕಣ್ಣನ್, ಗುರುಪ್ರಸಾದ್ ಕಾಸರಗೋಡು, ಸುನಿಲ್ ಅನಂತಪುರಂ, ಮಹೇಶ್ ಪುಣಿಯೂರು ಉಪಸ್ಥಿತರಿದ್ದರು.  ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಜಯನ್ ವಟ್ಟಿಪ್ರಮ್ ಸಮಾರೋಪ ಭಾಷಣ ಮಾಡಿದರು.

ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕುಂಬಳೆ ಸ್ವಾಗತಿಸಿದರು. ಒಬಿಸಿ ಮೋರ್ಚಾ ಕಾಸರಗೋಡು ಮಂಡಲಸಮಿತಿ ಅಧ್ಯಕ್ಷ ಅಶೋಕ್ ಚೆಟ್ಟಿಯಾರ್ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries