ಕಾಸರಗೋಡು: ಮುದ್ರಣ ಇಲಾಖೆ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿರುವ ಫಾರಂ ಕಚೇರಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೆ. 22ರಂದು ಆನ್‍ಲೈನ್ ಮೂಲಕ ಉದ್ಘಾಟಿಸುವರು.
ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಮತ್ತು ವನ್ಯಜೀವಿ ಖಾತೆ ಸಚಿವ ಎ.ಕೆ. ಶಶಿಂದ್ರನ್ ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎ. ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಮುದ್ರಣ ಇಲಾಖೆಯ ನಿರ್ದೇಶಕ ಅಮೀರ್ ಸಿ.ಎ, ಸರ್ಕಾರಿ ಮುದ್ರಣಾಲಯಗಳ ಸೂಪರಿಂಟೆಂಡೆಂಟ್ ಟಿ. ವೀರನ್, ಫಾರಂ ಕಂಟ್ರೋಲರ್ ಪ್ರಶಾಂತ್ ಕುಮಾರ್, ವಿವಿಧ ಕಾರ್ಮಿಕ ಸಂಘಗಳ ಮುಖಂಡರು ಮತ್ತು ಸೇವಾ ಸಂಘಟನೆಯ ಮುಖಂಡರು ಭಾಗವಹಿಸುವರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಸಿ ಮತ್ತು ಡಿ ಬ್ಲಾಕ್‍ನ ಎರಡನೇ ಮಹಡಿಯಲ್ಲಿ ಫಾರಂ ಕಚೇರಿಯು ಕಾರ್ಯಾಚರಿಸಲಿದೆ.

