ಕಾಸರಗೋಡು: ಶ್ರೀ ನಾರಾಯಣ ಧರ್ಮಪರಿಪಾಲನಂ(ಎಸ್‍ಎನ್‍ಡಿಪಿ)ಯೋಗಂನ ಕಾಸರಗೋಡು ಕೇಂದ್ರ ಕಚೇರಿ ಉದ್ಘಾಟನೆ ಹಗೂ ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸ್ವಾಗತ ಸಮಾರಂಭ ಕಾಸರಗೋಡು ಆರ್ಯ ಕಾತ್ರ್ಯಾಯಿನಿ ಕ್ಷೇತ್ರ ಸನಿಹ ಜರುಗಿತು.
ಎಸ್‍ಎನ್‍ಡಿಪಿ ಯೋಗಂ ತಪಾಸಣಾ ಅಧಿಕಾರಿ ಪಿ.ಟಿ.ಲಾಲು ಕಚೇರಿ ಉದ್ಘಾಟಿಸಿದರು. ತಳಂಗರೆ ಚೀರುಂಬಾ ಭಗವತಿ ದೇವಸ್ಥಾನ ನಾಗೇಶ ಕಾರ್ನವರ್, ಪುಲಿಕ್ಕುನ್ನು ಐವರ್ ಭಗವತಿ ದೇವಸ್ಥಾನದ ಮಂಜು ಕಾರ್ನವರ್ ದೀಪ ಬೆಳಗಿಸಿದರು. ಎಸ್‍ಎನ್‍ಡಿಪಿ ಯೋಗಂ ಕಾಸರಗೋಡು ಒಕ್ಕೂಟದ ಅಧ್ಯಕ್ಷ ನಾರಾಯಣ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು.
ತ್ರಿಸ್ತರ ಪಂಚಾಯಿತಿಯಲ್ಲಿ ಗೆಲುವು ಸಾಧಿಸಿದ ಸಮುದಾಯದ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದವರನ್ನು ಹಾಗೂ ಎಸ್ಸೆಸೆಲ್ಸಿ, ಪ್ಲಸ್‍ಟು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಗರಸಭಾ ಸದಸ್ಯ ಕೆ. ಮಧುಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಹೊಸದುರ್ಗ ಒಕ್ಕೂಟದ ಕಾರ್ಯದರ್ಶಿ ಕೆ. ವೇಣುಗೋಪಾಲನ್, ಉದುಮ ಯೂನಿಯನ್ ಕಾರ್ಯದರ್ಶಿ ಜಯಾನಂದನ್ ಪಾಲಕುನ್ನು, ವೆಳ್ಳರಿಕುಂಡ್ ಒಕ್ಕೂಟದ ಕಾರ್ಯದರ್ಶಿ ಪಿ.ಆರ್.ಶಶಿಧರನ್, ತೃಕರಿಪುರ ಒಕ್ಕೂಟದ ಕಾರ್ಯದರ್ಶಿ ಕುಞÂಕೃಷ್ಣನ್, ಜೋಶಿ ಕೊಡಕ್ಕಾಡ್, ನಿರ್ದೇಶಕ ವಕೀಲ ಪಿ.ಕೆ. ವಿಜಯನ್, ಮಹಿಳಾ ಗುಂಪಿನ ಅಧ್ಯಕ್ಷೆ ಸುನೀತಾ ದಾಮೋದರ್, ಉಪಾಧ್ಯಕ್ಷೆ ಸೌಮ್ಯ, ಮತ್ತು ಕಾರ್ಯದರ್ಶಿ ಮೋಹಿನಿ ಹರೀಶ್ ಉಪಸ್ಥಿತರಿದ್ದರು. ಕಾಸರಗೋಡು ಒಕ್ಕೂಟದ ಕಾರ್ಯದರ್ಶಿ ಗಣೇಶ್ ಪಾರೆಕಟ್ಟ ಸ್ವಾಗತಿಸಿದರು. ಒಕ್ಕೂಟದ ಉಪಾಧ್ಯಕ್ಷ ಎ.ಟಿ. ವಿಜಯನ್ ವಂದಿಸಿದರು.

