ಢಾಕಾ: 'ನಿಕಟಪೂರ್ವ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರು ನನ್ನನ್ನು ಹಲವು ಬಾರಿ ಅಧಿಕಾರದಿಂದ ತೆಗೆದುಹಾಕಲು ಯತ್ನಿಸಿದ್ದರು' ಎಂದು ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಆರೋಪಿಸಿದ್ದಾರೆ.
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷವು (ಬಿಎನ್‌ಪಿ) ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಅಧ್ಯಕ್ಷರು ಯೂನಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬಾಂಗ್ಲಾದ ಪ್ರಮುಖ ಪತ್ರಿಕೆ 'ಕಾಲರ್ ಕಂಠೋ'ಗೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್ ಶಹಾಬುದ್ದೀನ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 'ಈ ಹಿಂದಿದ್ದ 18 ತಿಂಗಳ ಮಧ್ಯಂತರ ಸರ್ಕಾರದಲ್ಲಿ ನನ್ನೊಂದಿಗೆ ಯಾವೊಂದು ಪ್ರಮುಖ ವಿಷಯವನ್ನು ಚರ್ಚಿಸದಿದ್ದರೂ, ನನ್ನ ವಿರುದ್ಧ ಹಲವು ಸಂಚುಗಳನ್ನು ರೂಪಿಸಲಾಗಿತ್ತು' ಎಂದಿದ್ದಾರೆ.

