ಕಾಸರಗೋಡು: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ಐದು ದಿವಸಗಳ ಕಾಲ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಗುರುವಾರ ಧ್ವಜಾರೋಹಣ ನಡೆಯಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ದಿವ್ಯ ಉಪಸ್ಥಿತರಿದ್ದರು. ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಉತ್ಸವ ನಡೆಯಲಿದೆ. ಸಂಜೆ ದೀಪೆÇೀತ್ಸವ ನಡೆಯಿತು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕಲೈ ಮಾಮಣಿ ಪದ್ಮಶ್ರೀ ಶ್ರೀಕಲ್ಯಾಣ ಸುಂದರಂ ಶ್ರೀ ರಾಜರಾಜೇಶ್ವರಿ ಭರತನಾಟ್ಯ ಕಲಾಮಂದಿರ ಮುಂಬಯಿ ಇದರ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಭರತನಾಟ್ಯ ನಡೆಯಿತು.
13ರಂದು ನಡುದೀಪೆÇೀತ್ಸವ, 14ರಂದು ಶ್ರೀಭೂತಬಲಿ, ಬೆಡಿ ಉತ್ಸವ, ಶ್ರೀಮಠದ ಮುಂಭಾಗ ರಾತ್ರಿ 12 ರಿಂದ ಪುಷ್ಪ ರಥೋತ್ಸವ, 16ರಂದು ರಾತ್ರಿ 9.30 ರಿಂದ ಶ್ರೀಮಠದ ಮುಂಭಾಗ ನೃತ್ಯೋತ್ಸವ, ವಿಶೇಷ ತೆಪೆÇ್ಪೀತ್ಸವ ನಡೆಯಲಿದೆ. ನಂತರ ಅವಭೃತ ಸ್ನಾನದೊಂದಿಗೆ ಪ್ರಸಾದವಿತರಣೆಯಾಗಿ ಧ್ವಜಾವರೋಹಣ ನಡೆಯುವುದು.
18ರಂದು ಬೆಳಿಗ್ಗೆ 10ಕ್ಕೆ ಮಠದ ಮುಂಭಾಗ ವಿಷ್ಣುಮೂರ್ತಿ, ಗುಳಿಗ ದೈವದ ಕೋಲ ಊರವರ ವತಿಯಿಂದ ಜರಗಲಿದೆ. 22ರಂದು ಬೆಳಿಗ್ಗೆ 7ರಿಂದ ಶ್ರೀಮಠದ ಕಾವಲು ದೈವ ಕುಂಟಪಾಲ ಚಾಮುಂಡಿ ಕೋಲ ನಡೆಯಲಿದೆ.



