ಮಂಜೇಶ್ವರ: ಕುಂಜತ್ತೂರಿನಲ್ಲಿ ಪುತ್ರಿ ಹಾಗೂ ಪತ್ನಿ ಸಹೋದರಿ ಪತಿಯನ್ನು ಕಡಿದು ಕೊಲೆಗೈದ ಪ್ರಕರಣದ ಆರೋಪಿ ಕುಂಜತ್ತೂರು ಹಿಲ್‍ಟಾಪ್ ನಿವಾಸಿ, ಉಮ್ಮರ್‍ಫಾರೂಕ್‍ನನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದ್ದು, ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆತಂದು ಮಾಹಿತಿ ಸಂಗ್ರಹಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಮತ್ತೆ ನ್ಯಾಯಾಂಗ ಬಂಧನಕ್ಕೆಒಪ್ಪಿಸಲಾಗಿದೆ.
ಇನ್ಸ್‍ಪೆಕ್ಟರ್ ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಕಳೆದ ಐದು ದಿವಸಗಳಿಂದ ವಿವಿಧೆಡೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದೆ. ಅವಳಿ ಕೊಲೆಗೆ ಬಳಸಿದ್ದ ಕತ್ತಿಯನ್ನು ಉಪ್ಪಳದ ರೈಲ್ವೆ ನಿಲ್ದಾಣ ಸನಿಹದ ಅಂಗಡಿಯೊಂದರಿಂದ ಖರೀದಿಸಿರುವುದಾಗಿ ಆರೋಪಿ ನೀಡಿದ ಮಾಹಿತಿಯನ್ವಯ ಅಂಗಡಿಗೆ ತೆರಳಿ ಮಾಹಿತಿ ಸಂಗ್ರಹಿಸಲಾಯಿತು. ಅಂಗಡಿ ಮಾಲಿಕ ಆರೋಪಿ ಗುರುತು ಪತ್ತೆಹಚ್ಚಿದ್ದಾರೆ. ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಆರೋಪಿ ಅಂಗಡಿಗೆ ತೆರಳುವುದು ಹಾಗೂ ಅಲ್ಲಿಂದ ವಾಪಸಾಗುವ ದೃಶ್ಯವವಳಿಗಳೂ ಪೊಲೀಸರಿಗೆ ಲಭ್ಯವಾಗಿದೆ. ಆರಂಭದಲ್ಲಿಒಂದು ಹಾರ್ಡ್‍ವೇರ್ ಅಂಗಡಿಗೆ ತೆರಳಿ ಕತ್ತಿಗಾಗಿ ಹುಡುಕಾಡಿದ್ದು, ಅಲ್ಲಿ ಲಭಿಸದಿದ್ದಾಗ ಉಪ್ಪಳ ರೈಲ್ವೆ ನಿಲ್ದಾಣ ಸನಿಹದ ಅಂಗಡಿಗೆ ತೆರಳಿ ಖರೀದಿಸಿರುವುದಾಗಿ ಆರೋಪಿ ಪೊಲೀಸರಲ್ಲಿ ತಿಳಿಸಿದ್ದಾನೆ.
ಹಲ್ಲೆಗೆ ಯತ್ನಿಸಿದ ಮಹಿಳೆಯರು:
ಮಾಹಿತಿ ಸಂಗ್ರಹಿಸಲು ಆರೋಪಿಯನ್ನು ಕುಂಜತ್ತೂರಿನ ಮನೆಗೆ ಕರೆತಂದಾಗ ಈತನ ಪತ್ನಿ ಸೇರಿದಂತೆ ಅಲ್ಲಿನ ಮಹಿಳೆಯರು ಆಕ್ರೋಶಭರಿತರಾಗಿ ಈತನ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನಡೆದಿದೆ. ತಕ್ಷಣ ಪೊಲೀಸರು ಈತನನ್ನು ರಕ್ಷಿಸಿದ್ದಾರೆ. ಆರೋಪಿ ಉಮ್ಮರ್‍ಫಾರೂಕ್‍ನನ್ನು ಮನೆಗೆ ಕರೆದೊಯ್ದು ಹೇಳಿಕೆ ದಾಖಲಿಸಿಕೊಂಡ ನಂತರ ವಾಹನದ ಬಳಿ ತೆರಳುತ್ತಿದ್ದಂತೆ ಮಹಿಳೆಯರ ತಂಡ ಈತನಿಗೆ ಮುತ್ತಿಗೆ ಹಾಕಿ ಥಳಿಸಲು ಮುಂದಾಗಿತ್ತು.
ಫೆ. 2ರಂದು ಕುಂಜತ್ತೂರಿನಲ್ಲಿ ಅವಳಿ ಕೊಲೆ ನಡೆದಿದೆ. ಆಸ್ತಿ ಸಂಬಂಧಿ ತರ್ಕ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆಗಾಗಿ ಎರಡೂ ಕಡೆಯವರು ಒಟ್ಟುಸೇರಿದ್ದು, ಈ ಮಧ್ಯೆ ಉಮ್ಮರ್ ಫಾರೂಕ್ ಹಾಗೂ ಶೇಕುಞÂ ಮಧ್ಯೆ ವಾಗ್ವಾದ ನಡೆದಾಗ ಉಮ್ಮರ್‍ಫಾರೂಕ್ ಕತ್ತಿಯಿಂದ ಕಡಿದಿದ್ದಾನೆ. ಇದನ್ನು ತಡೆಯಲು ಬಂದ ಪುತ್ರಿ ಮರಿಯಂ ಜುಮೈಲಾ(18)ಹಾಗೂ ಶೇಕುಞÂ ಗಂಭೀರ ಗಾಯಗೊಂಡಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.



