ತಪಾಸಣೆಯಿಂದ ತಪ್ಪಿಸಿಕೊಳ್ಳಲು ಗುರುತುಗಳ ನಕಲಿ ಅಥವಾ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾದ ಮಾಜಿ ಬಿಎಸ್‌ಎಫ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಭಾನುವಾರ ಬಿಹಾರದಿಂದ ಪಶ್ಚಿಮಬಂಗಾಳಕ್ಕೆ ಸಂದೇಹಾಸ್ಪದ ವಾಹನವೊಂದು ಪ್ರವೇಶಿಸುತ್ತಿರುವ ಬಗೆಗಿನ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಬಿಧಾನ್‌ನಗರ ತನಿಖಾ ಕೇಂದ್ರದ ಅಧಿಕಾರಿಗಳು ಡಾರ್ಜಿಲಿಂಗ್ ಜಿಲ್ಲೆಯ ತಪಾಸಣಾ ಕೇಂದ್ರದಲ್ಲಿ ಈ ಮಾದಕ ದ್ರವ್ಯವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಈ ಕಾರು ಪ್ರಮುಖ ಬಿಎಸ್‌ಎಫ್ ಗುರುತು ಹಾಗೂ ಮಾರ್ಪಡಿಸಿದ ನಂಬರ್ ಪ್ಲೇಟ್ ಜೋಡಣೆಯಿಂದ ಗಮನ ಸೆಳೆಯಿತು. ಶೋಧ ನಡೆಸಿದಾಗ ನಂಬರ್ ಪ್ಲೇಟ್‌ನ ಹಿಂಭಾಗದಲ್ಲಿ ಒಂದು ರಂಧ್ರ ಕಂಡು ಬಂತು. ಅದರಲ್ಲಿ ಹಲವು ಪ್ಯಾಕೇಟ್‌ಗಳು ಬ್ರೌನ್ ಶುಗರ್ ಪತ್ತೆಯಾಯಿತು.
ಚಾಲಕನನ್ನು ಬಿಹಾರದ ಕಟಿಹಾರ್‌ನ ಅಲೋಕ್ ಕುಮಾರ್ ರವಿಕರ್ ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಆತ ತಾನು ಛತ್ತೀಸ್‌ಗಢದಲ್ಲಿ ನಿಯೋಜಿತ ಬಿಎಸ್‌ಎಫ್ ಇನ್ಸ್‌ಪೆಕ್ಟರ್, ವೈದ್ಯಕೀಯ ರಜೆಯಲ್ಲಿದ್ದೇನೆ ಎಂದು ತಿಳಿಸಿದ್ದಾನೆ. ತನ್ನ ಹೇಳಿಕೆಯನ್ನು ಬೆಂಬಲಿಸಲು ಗುರುತಿನ ಚೀಟಿ ತೋರಿಸಿದ್ದಾನೆ.
ಆದರೆ, ಪರಿಶೀಲನೆ ನಡೆಸಿದಾಗ, ಆತ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಮಾಜಿ ಬಿಎಸ್‌ಎಫ್ ಸಿಬ್ಬಂದಿ ಎಂದು ತಿಳಿದು ಬಂದಿದೆ.

