ಕಣ್ಣೂರು: ಕೆಎಸ್‍ಯು ಪ್ರತಿಭಟನೆಯ ಸಂದರ್ಭದಲ್ಲಿ ಗಾಯಗೊಂಡು ಕಣ್ಣೂರು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವೆ ವೀಣಾ ಜಾರ್ಜ್ ಅವರೊಂದಿಗೆ ಪೋಟೋ ತೆಗೆದ ಆರೋಗ್ಯ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಐಸಿಯುನಲ್ಲಿ ಸಚಿವೆಯೊಂದಿಗೆ ನರ್ಸ್‍ಗಳು ತೆಗೆದ ಚಿತ್ರ ಭಾರೀ ಟೀಕೆಗೆ ಕಾರಣವಾಗಿದೆ.
ಸಚಿವರು ಮತ್ತು ಆರೋಗ್ಯ ಕಾರ್ಯಕರ್ತರು ನಗುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಸಚಿವರ ಕಚೇರಿ ವೈದ್ಯಕೀಯ ಕಾಲೇಜು ಅಧಿಕಾರಿಗಳಿಂದ ವಿವರಣೆ ಕೋರಿತು. ನಂತರ ಆಸ್ಪತ್ರೆಯ ಸೂಪರಿಂಟೆಂಡೆಂಟ್ ತನಿಖೆಗೆ ಆದೇಶಿಸಿದರು. ಇದು ಆರೋಗ್ಯ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆಗೆ ಕಾರಣವಾಗಬಹುದಾಗಿದೆ.
ಸಚಿವರಿಗೆ ಚಿಕಿತ್ಸೆ ನೀಡಿದ ವೈದ್ಯರ ಹೇಳಿಕೆಗಳನ್ನು ರೈಲ್ವೆ ಪೋಲೀಸರು ದಾಖಲಿಸಿಕೊಂಡಿದ್ದಾರೆ. ರೈಲ್ವೆ ಸಿಐ ಸುಧೀರ್ ಮನೋಹರ್ ನೇತೃತ್ವದ ತನಿಖಾ ತಂಡವು ಹೇಳಿಕೆಯನ್ನು ತೆಗೆದುಕೊಂಡಿದೆ. ದೂರು ದಾಖಲಿಸಿದ ಸಚಿವರ ಗನ್ ಮ್ಯಾನ್ ಅಭಿಲಾಷ್ ಅವರ ಹೇಳಿಕೆಯನ್ನು ಸಹ ದಾಖಲಿಸಲಾಗಿದೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ಚಿಕಿತ್ಸೆ ಪಡೆಯುತ್ತಿದ್ದಾಗ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಕ್ಕಾಗಿ ಟೀಕೆಗೊಳಗಾದ ನಂತರ, ಕಣ್ಣೂರು ಪರಿಯಾರಂ ವೈದ್ಯಕೀಯ ಕಾಲೇಜಿನ ನರ್ಸ್ ಪಿ.ಸಿ. ಸ್ಮಿತಾ ಫೇಸ್‍ಬುಕ್‍ನಲ್ಲಿ ವಿವರಿಸಿದ್ದಾರೆ. ಸಚಿವರು ತೀವ್ರ ದೈಹಿಕ ನೋವಿನ ಜೊತೆಗೆ ಮಾನಸಿಕ ತೊಂದರೆಯಿಂದ ಬಳಲುತ್ತಿರುವಂತೆ ಸಚಿವರು ವರ್ತಿಸುತ್ತಿದ್ದರು> ಈ ಹಿನ್ನೆಲೆಯಲ್ಲಿ ಮಾನಸಿಕ ಆಹ್ಲಾದ ನೀಡಲು ಪೋಟೋ ತೆಗೆಸಿಕೊಂಡೆವು ಎಂದವರು ತಿಳಿಸಿದ್ದಾರೆ. ಆದರೆ ಸಚಿವರು ಯಾವುದೇ ಸಮಸ್ಯೆ ಇಲ್ಲದೆ ಖುಷಿಯಾಗಿದ್ದಾರೆ, ಅವರು ನಾಟಕವಾಡುತ್ತಿದ್ದಾರೆ ಎಂಬ ಪ್ರಚಾರವು ಅಮಾನವೀಯವಾಗಿದೆ ಎಂದು ನರ್ಸ್ ಪೋಸ್ಟ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ. ಬೆಂಬಲ ವ್ಯಕ್ತಪಡಿಸಲು ಸಚಿವರೊಂದಿಗೆ ಪೋಟೋ ತೆಗೆದು ಪೋಸ್ಟ್ ಮಾಡಿದ್ದೇನೆ ಎಂದು ಸ್ಮಿತಾ ಬರೆದುಕೊಂಡಿದ್ದಾರೆ.

